Saturday, April 17, 2021
Home ಸುದ್ದಿ ಜಾಲ ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ

ಇದೀಗ ಬಂದ ಸುದ್ದಿ

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ರೈತರು ಬಳಸುವ ಡೀಸೆಲ್ ಗೆ ಸಬ್ಸಿಡಿ ನೀಡುವ ಸಂಬಂಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

BIG NEWS : ರಾಜ್ಯದಲ್ಲಿ ಈ ವರ್ಷದಿಂದಲೇ ‘ನೂತನ ಶಿಕ್ಷಣ ನೀತಿ’ ಜಾರಿ

ರೈತರ ಪ್ರತಿ ಎಕರೆ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಲು ವರ್ಷಕ್ಕೆ ಕನಿಷ್ಟ 25 ಲೀಟರ್ ಡೀಸೆಲ್ ಬೇಕಾಗುತ್ತದೆ. ಇದಕ್ಕಾಗಿ ವರ್ಷಕ್ಕೊಮ್ಮೆ ಪ್ರತಿ ಲೀಟರ್ ಗೆ 25 ರೂ. ಸಬ್ಸಿಡಿ ನೀಡಲು ಉದ್ಧೇಶಿಸಲಾಗಿದ್ದು, ಗರಿಷ್ಠ 10 ಎಕರೆ ತನಕ ರೈತರು ಬಳಸುವ ಡೀಸೆಲ್ ಗೆ ಸಬ್ಸಿಡಿ ಕೊಡುವುದರಿಂದ 48 ಲಕ್ಷ ರೈತರಿಗೆ 1,300 ಕೋಟಿ ರೂ. ಬಜೆಟ್ ನೆರವು ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಈ ಪ್ರಸ್ತಾವನೆಗೆ ಮುಖ್ಯಮಂತ್ರಿಗಳ ಮನವೊಲಿಸುವ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

TRENDING