Tuesday, April 13, 2021
Home ಸುದ್ದಿ ಜಾಲ ‘ಎಟಿಎಂ’ಗೆ ಹಣ ಡ್ರಾ ಮಾಡಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಇದೀಗ ಬಂದ ಸುದ್ದಿ

‘ಎಟಿಎಂ’ಗೆ ಹಣ ಡ್ರಾ ಮಾಡಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಬೇರೆ ಬ್ಯಾಂಕಿನ ಎಟಿಎಂನಿಂದ ಹಣ ವಿತ್​ ಡ್ರಾ ಮಾಡಿದ್ರೆ ಸಂಬಂಧಪಟ್ಟ ಬ್ಯಾಂಕುಗಳು ಶುಲ್ಕ ವಿಧಿಸುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಆದರೆ ನೀವು ಎಟಿಎಂನಿಂದ ಡ್ರಾ ಮಾಡೋಕೆ ಹೊರಟ ಹಣಕ್ಕಿಂತ ಕಡಿಮೆ ಮೊತ್ತ ನಿಮ್ಮ ಬ್ಯಾಂಕಿನಲ್ಲಿದ್ದರೆ ನಿಮಗೆ ಬ್ಯಾಂಕ್​ ಶುಲ್ಕ ವಿಧಿಸುತ್ತೆ ಅನ್ನೋ ವಿಚಾರ ಬಹುತೇಕ ಗ್ರಾಹಕರಿಗೆ ತಿಳಿದೇ ಇಲ್ಲ.

ಹೀಗಾಗಿ ಎಟಿಎಂನಿಂದ ಹಣ ಡ್ರಾ ಮಾಡುವ ಮೊದಲು ನಿಮ್ಮ ಖಾತೆಯಲ್ಲಿನ ಮೊತ್ತವನ್ನ ಪರಿಶೀಲನೆ ಮಾಡಿಕೊಳ್ಳೋದು ಒಳ್ಳೆಯದು.

ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳೋಕೆ ನಿಮಗೆ ಹಲವು ಮಾರ್ಗಗಳು ಗೊತ್ತಿರಬಹುದು. ಆದರೆ ಈ ರೀತಿ ಖಾತೆಯಲ್ಲಿದ್ದಕ್ಕಿಂತ ಹೆಚ್ಚು ಹಣವನ್ನ ಎಟಿಎಂನಲ್ಲಿ ನಮೂದಿಸಿ ನೀವು ಮಾಡುವ ವ್ಯವಹಾರಕ್ಕೆ ಬ್ಯಾಂಕ್​ಗಳು ಎಷ್ಟು ಶುಲ್ಕ ವಿಧಿಸುತ್ತವೆ ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ.

ಮುಂಚೂಣಿ ಬ್ಯಾಂಕ್​ಗಳಾದ ಐಸಿಐಸಿಐ, ಕೋಟಕ್​ ಮಹೀಂದ್ರಾ, ಎಸ್​ಬಿಐ, ಯೆಸ್​ ಬ್ಯಾಂಕ್​, ಹೆಚ್​ಡಿಎಫ್​ಸಿ ಸೇರಿದಂತೆ ಅನೇಕ ಬ್ಯಾಂಕ್​ಗಳು ನಿಮಗೆ ಈ ರೀತಿಯ ವ್ಯವಹಾರಕ್ಕೆ ದಂಡ ವಿಧಿಸುತ್ತವೆ.

ಎಸ್​ಬಿಐ ಬ್ಯಾಂಕ್​​ನಲ್ಲಿ 20 ರೂಪಾಯಿ ಹಾಗೂ ಜಿಎಸ್​ಟಿ, ಹೆಚ್​ಡಿಎಫ್​ಸಿ 25 ರೂಪಾಯಿ, ಐಸಿಐಸಿಐ 25 ರೂಪಾಯಿ, ಯೆಸ್​ ಬ್ಯಾಂಕ್​​ 25 ರೂಪಾಯಿ, ಆಕ್ಸಿಸ್​ ಬ್ಯಾಂಕ್​ 25 ರೂಪಾಯಿ ಶುಲ್ಕ ವಿಧಿಸಲಿದೆ.

ಹೀಗಾಗಿ ಇನ್ಮುಂದೆ ಎಟಿಎಂನಿಂದ ಹಣ ಡ್ರಾ ಮಾಡುವ ಮುನ್ನ ನಿಮ್ಮ ಖಾತೆಯಲ್ಲಿನ ಮೊತ್ತವನ್ನ ಒಮ್ಮೆ ಪರಿಶೀಲನೆ ಮಾಡಿಕೊಂಡಲ್ಲಿ ಅನಗತ್ಯ ಶುಲ್ಕದ ಹೊರೆಯಿಂದ ಪಾರಾಗಬಹುದಾಗಿದೆ.

TRENDING