Saturday, April 17, 2021
Home ಸುದ್ದಿ ಜಾಲ ಇಂದು ಪ್ರಧಾನಿ ಮೋದಿಯಿಂದ `ಭಾರತೀಯ ಅಟಿಕೆ ಮೇಳ-2021' ಕ್ಕೆ ಚಾಲನೆ

ಇದೀಗ ಬಂದ ಸುದ್ದಿ

ಇಂದು ಪ್ರಧಾನಿ ಮೋದಿಯಿಂದ `ಭಾರತೀಯ ಅಟಿಕೆ ಮೇಳ-2021′ ಕ್ಕೆ ಚಾಲನೆ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಅಟಿಕೆ ಮೇಳ-2021 (ದಿ ಇಂಡಿಯಾ ಟಾಯ್ ಫೇರ್ 2021) ಉದ್ಘಾಟಿಸಲಿದ್ದಾರೆ.

ಫೆಬ್ರವರಿ 27 ರಿಂದ ಮಾರ್ಚ್ 2ರವರೆಗೆ ಈ ಮೇಳ ನಡೆಯಲಿದ್ದು, ಖರೀದಿದಾರರು, ಮಾರಾಟಗಾರರು, ವಿದ್ಯಾರ್ಥಿಗಳು, ಶಿಕ್ಷಕರು, ವಿನ್ಯಾಸಕರು ಸೇರಿದಂತೆ ಎಲ್ಲ ಪಾಲುದಾರರನ್ನು ಒಂದು ಗೂಡಿಸುವ ಮೂಲಕ ಸುಸ್ಥಿರ ಸಂಪರ್ಕ ಗಳನ್ನು ಸೃಷ್ಟಿಸುವುದು ಮತ್ತು ಉದ್ಯಮದ ಸಮಗ್ರ ಅಭಿವೃದ್ಧಿಗೆ ಸಂವಾದವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

2020ರ ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ, ಮಗುವಿನ ಬೆಳವಣಿಗೆಯಲ್ಲಿ ಅಟಿಕೆಗಳ ಪಾತ್ರ ಮಹತ್ವದ್ದು, ಭಾರತದಲ್ಲಿ ಅಟಿಕೆಗಳ ಉತ್ಪಾದನೆ ಹೆಚ್ಚಿಸಲು ಕ್ರಮ ವಹಿಸುವುದಾಗಿ ಹೇಳಿದ್ದರು. ಹೀಗಾಗಿ ದೇಶದಲ್ಲಿ ಅಟಿಕೆಗಳ ಉತ್ಪಾದನೆಗೆ ಉತ್ತೇಜನ ನೀಡಲು ಭಾರತೀಯ ಅಟಿಕೆ ಮೇಳ 2021 ಆಯೋಜಿಸಲಾಗಿದೆ.

30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 1000ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಉತ್ಪನ್ನಗಳನ್ನು ಇ-ಕಾಮರ್ಸ್ ಸಕ್ರಿಯಗೊಳಿಸಿದ ವರ್ಚುವಲ್ ಪ್ರದರ್ಶನದಲ್ಲಿ ಪ್ರದರ್ಶಿಸಲಿದ್ದಾರೆ.

TRENDING