Tuesday, April 13, 2021
Home ಅಂತರ್ ರಾಷ್ಟ್ರೀಯ ಮಾರ್ಚ್ 31ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು

ಇದೀಗ ಬಂದ ಸುದ್ದಿ

ಮಾರ್ಚ್ 31ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು

ನವದೆಹಲಿ: ಮಾರ್ಚ್ 31ರವರೆಗೆ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟವನ್ನ ನಿಷೇಧ ಹೇರಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಸುತ್ತೋಲೆಯಲ್ಲಿ ತಿಳಿಸಿದೆ. 11 ತಿಂಗಳ ಅಂತರದ ಬಳಿಕ ಸಾಗರೋತ್ತರ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು.

ಆಯ್ದ ದೇಶಗಳೊಂದಿಗಿನ ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದಗಳ ಅಡಿಯಲ್ಲಿ ಸಮರ್ಪಿತ ಕಾರ್ಗೊ ವಿಮಾನಗಳು ಮತ್ತು ವಿಮಾನಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಾಗುವುದು ಎಂದು ನಾಗರಿಕ ವಿಮಾನಯಾನ ವಾಚ್‌ ಡಾಗ್ ತಿಳಿಸಿದೆ.

ದ್ವಿಪಕ್ಷೀಯ ಏರ್‌ ಬಬ್ಬಲ್ ಭಾ‌ರತ ಮತ್ತು ಇತರ ದೇಶಗಳ ನಡುವೆ ವಿಮಾನ ಹಾರಾಟವನ್ನು ಪುನರಾರಂಭಿಸುವ ಒಂದು ವ್ಯವಸ್ಥೆಯಾಗಿದ್ದು, ಈ ಸಂದರ್ಭದಲ್ಲಿ ಪೂರ್ವ ಷರತ್ತುಗಳನ್ನು ಹೊಂದಿದೆ.

ಭಾರತವು ಪ್ರಸ್ತುತ ಸುಮಾರು 27 ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ವೈಮಾನಿಕ ಒಪ್ಪಂ‌ದ ಹೊಂದಿದ್ದು, ಇದರಲ್ಲಿ ಆಫ್ಘಾನಿಸ್ತಾನ, ಬಹರೇನ್, ಬಾಂಗ್ಲಾದೇಶ, ಭೂತಾನ್, ಕೆನಡಾ, ಇಥಿಯೋಪಿಯಾ, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಕೀನ್ಯಾ, ಕುವೈತ್, ಮಾಲ್ಡೀವ್ಸ್, ನೇಪಾಳ, ನೆದರ್ಲ್ಯಾಂಡ್ಸ್, ನೈಜೀರಿಯಾ, ಒಮಾನ್, ಕತಾರ್, ರುವಾಂಡಾ, ಸೆಷೆಲ್ಸ್, ತಾಂಜಾನಿಯಾ, ಉಕ್ರೇನ್, ಯುಎಇ, ಯುಕೆ, ಉಜ್ಬೇಕಿಸ್ತಾನ ಮತ್ತು ಅಮೆರಿಕ ದೇಶಗಳಿವೆ.

TRENDING