Saturday, April 17, 2021
Home ಕ್ರೈಂ ನ್ಯೂಸ್ ಮಗುವಿಗೆ ಹಾಲುಣಿಸುತ್ತಿರುವಾಗಲೇ ಪತಿಯಿಂದ ಘೋರ ಕೃತ್ಯ!

ಇದೀಗ ಬಂದ ಸುದ್ದಿ

ಮಗುವಿಗೆ ಹಾಲುಣಿಸುತ್ತಿರುವಾಗಲೇ ಪತಿಯಿಂದ ಘೋರ ಕೃತ್ಯ!

ಹುಬ್ಬಳ್ಳಿ: ಪತ್ನಿಯು ತನ್ನನ್ನು ಬಿಟ್ಟು ಬೇರೆಯವನೊಂದಿಗೆ ಇದ್ದುದನ್ನು ಸಹಿಸಲಾಗದ ವ್ಯಕ್ತಿಯೊಬ್ಬ ಮಗುವಿಗೆ ಹಾಲುಣಿಸುತ್ತಿದ್ದಾಗಲೇ ಬ್ಲೇಡ್‌ನಿಂದ ಪತ್ನಿ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಸೆಟ್ಲಮೆಂಟ್‌ನ ಗಂಗಾಧರ ನಗರದಲ್ಲಿ ಶುಕ್ರವಾರ ನಡೆದಿದೆ.

ಸಂಗೀತಾ ಮುಳಗುಂದ ಎಂಬುವರೆ ಹಲ್ಲೆಗೊಳಗಾಗಿದ್ದು, ಸುನಿಲ ಮುಳಗುಂದ ಆರೋಪಿಯಾಗಿದ್ದಾನೆ. ಸಂಗೀತಾ ಮತ್ತು ಸುನಿಲ ನಡುವೆ ಮೊದಲಿನಿಂದಲೂ ವೈಮನಸ್ಸು ಇತ್ತು. ಇಬ್ಬರು 2 ವರ್ಷಗಳಿಂದ ಬೇರೆ ಬೇರೆಯಾಗಿದ್ದರು. ಸಂಗೀತಾ ಇನ್ನೊಬ್ಬನೊಂದಿಗೆ ಜೀವನ ಸಾಗಿಸುತ್ತಿದ್ದರು. 2 ತಿಂಗಳ ಹಿಂದಷ್ಟೆ ಹೆರಿಗೆ ಆಗಿತ್ತು. ಇದರಿಂದ ಕುಪಿತನಾಗಿದ್ದ ಸುನಿಲ, ಶುಕ್ರವಾರ ಬೆಳಗ್ಗೆ ಏಕಾಏಕಿ ಮನೆಗೆ ನುಗ್ಗಿ ಬ್ಲೇಡ್‌ನಿಂದ ಸಂಗೀತಾಳ ಬೆನ್ನಿಗೆ ಮನಬಂದಂತೆ ಇರಿದು ಪರಾರಿಯಾಗಿದ್ದ. ಸಂಗೀತಾ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುನಿಲನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

TRENDING