ಬೆಂಗಳೂರು: ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇಳಿಕೆಯತ್ತಾ ಮುಖ ಮಾಡಿರುವ ಬಂಗಾರದ ಬೆಲೆ ಸತತ ನಾಲ್ಕನೇ ದಿನವೂ ಇಳಿಕೆಯಾಗಿದೆ. 8 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಸಾವರ್ಕಾಲಿಕ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 10,000 ರೂಪಾಯಿ ಇಳಿಕೆಯಾಗಿದೆ.
ಅದ್ರಂತೆ, ಇಂದು ಕೂಡ ಬೆಂಗಳೂರಿನಲ್ಲಿ 24 ಕ್ಯಾರೆಟ್ʼನ 10 ಗ್ರಾಂ. ಚಿನ್ನದ ಬೆಲೆಯಲ್ಲಿ ಬರೋಬ್ಬರಿ 170 ಇಳಿಕೆಯಾಗಿದ್ದು, 47,180 ಆಗಿದೆ. ಇನ್ನು 1 ಕೆಜಿ ಬೆಳ್ಳಿಯ ಬೆಲೆ ₹56,200ಕ್ಕೆ ಇಳಿದಿದೆ.
2020ರಲ್ಲಿ ಗಗನಮುಖಿಯಾಗಿದ್ದ ಚಿನ್ನ -ಬೆಳ್ಳಿ ದರಗಳು 2021ರ ಆರಂಭದಿಂದಲೂ ಇಳಿಕೆಯ ಹಾದಿ ಹಿಡಿದಿವೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಯಾಗಿದ್ದು, ಗ್ರಾಹಕ ಮಾರುಕಟ್ಟೆಯಲ್ಲಿ ಬೆಲೆಗಳಲ್ಲಿ ವ್ಯತ್ಯಾಸವಿರುತ್ತೆ.