Tuesday, April 13, 2021
Home ಅಂತರ್ ರಾಜ್ಯ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

ಇದೀಗ ಬಂದ ಸುದ್ದಿ

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

 ನವದೆಹಲಿ, ಫೆ. 26: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಹಾಗೂ ಬೆಲೆ ಏರಿಕೆಯ ಬಿಸಿ ನಡುವೆ ಮತ್ತೆ ಚುನಾವಣಾ ಕಾವು ಶುರುವಾಗಿದೆ. 2021ರ ಮೊದಲ ಚುನಾವಣೆಗೆ ಸಿದ್ಧತೆ ನಡೆದಿದೆ. ಇನ್ನು ಕೆಲವು ತಿಂಗಳಲ್ಲಿ ವಿಧಾನಸಭೆ ಅವಧಿ ಪೂರ್ಣಗೊಳ್ಳಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೆರಿಗಳ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿದೆ.

ನಾಲ್ಕು ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದರು. ಕೊರೊನಾ ವೈರಸ್ ಸೋಂಕಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚುನಾವಣೆ ನಡೆಸಲಾಗುವುದು. ಇದರ ಜತೆಗೆ ಐದು ರಾಜ್ಯಗಳಲ್ಲಿನ ಹಬ್ಬ ಆಚರಣೆಗಳು ಮತ್ತು ಪರೀಕ್ಷೆಗಳನ್ನು ಸಹ ಗಮನದಲ್ಲಿರಿಸಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯ ಮಾಹಿತಿಗಳ ಅಪ್‌ಡೇಟ್ ಇಲ್ಲಿ ಲಭ್ಯವಾಗಲಿದೆ.

ಹೊಸ ವರ್ಷದ ಪರಿಕಲ್ಪನೆ ಭರವಸೆಯ ಸಂಕೇತವಾಗಿದೆ. ಕೋವಿಡ್ ಯೋಧರಿಗೆ ಪರಸ್ಪರ ಹಾಗೂ ಸಮಗ್ರ ಅಭಿನಂದನೆಗಳನ್ನು ಸಲ್ಲಿಸುತ್ತವೆ. ಕೋವಿಡ್ ರೂಪದಲ್ಲಿ ಹಿಂದೆಂದೂ ಕಾಣದ ಬಿಕ್ಕಟ್ಟು ಎದುರಾಗಿದೆ. 2020ರಲ್ಲಿ ಚುನಾವಣೆ ನಡೆಸುವ ಪರೀಕ್ಷೆಯನ್ನು ಎದುರಿಸಿಸಿದ್ದೇವೆ. ಬಿಹಾರ ಚುನಾವಣೆ ದೊಡ್ಡ ಸವಾಲಿನ ಪರೀಕ್ಷೆಯಾಗಿತ್ತು. 7.3 ಕೋಟಿ ಮತದಾರರು ಬಿಹಾರದಲ್ಲಿ ಮತ ಚಲಾಯಿಸಿದ್ದರು ಎಂದು ಸುನಿಲ್ ಅರೋರಾ ಹೇಳಿದರು.

ಸಾಂಕ್ರಾಮಿಕದ ಬಿಕ್ಕಟ್ಟಿನ ಸನ್ನಿವೇಶದ ನಡುವೆ ಚುನಾವಣಾ ಆಯೋಗವು ರಾಜ್ಯಸಭೆಯ 18 ಸೀಟುಗಳ ಚುನಾವಣೆಯ ಪ್ರಯೋಗ ನಡೆಸಿತು. ಬಳಿಕ ಬಿಹಾರ ಚುನಾವಣೆಯ ದೊಡ್ಡ ಸವಾಲು ಎದುರಾಯಿತು. ಅದು ಆಯೋಗದ ಪಾಲಿಗೆ ಇಕ್ಕಟ್ಟಿನ ಸನ್ನಿವೇಶವಾಗಿತ್ತು ಎಂದು ನೆನಪಿಸಿಕೊಂಡರು.

ಈ ಚುನಾವಣೆಗಳಲ್ಲಿ 824 ವಿಧಾನಸಭೆ ಚುನಾವಣೆಗಳಲ್ಲಿ 86 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.

ಪಶ್ಚಿಮ ಬಂಗಾಳದ 294, ತಮಿಳುನಾಡಿನ 234, ಕೇರಳದ 140, ಅಸ್ಸಾಂನ 16 ಹಾಗೂ ಪುದುಚೆರಿಯ 33 ಸೀಟುಗಳಿಗೆ (30 ಚುನಾಯಿತ ಮತ್ತು 3 ಕೇಂದ್ರದಿಂದ ನಾಮನಿರ್ದೇಶನಗೊಂಡವರು) ಚುನಾವಣೆ ನಡೆಯಲಿದೆ. ಕೋವಿಡ್ ಸಂಕಷ್ಟದ ನಡುವೆಯೇ ಕಳೆದ ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಸಿದ ಅನುಭವದ ಆಯೋಗಕ್ಕೆ ಇದೆ.

TRENDING