Saturday, April 17, 2021
Home ಸುದ್ದಿ ಜಾಲ ಬ್ಯಾಂಕ್ ಗ್ರಾಹಕರೇ ಗಮನಿಸಿ : ಮಾರ್ಚ್ 1 ರಿಂದ ಬದಲಾಗಲಿವೆ ಈ ನಿಯಮಗಳು!

ಇದೀಗ ಬಂದ ಸುದ್ದಿ

ಬ್ಯಾಂಕ್ ಗ್ರಾಹಕರೇ ಗಮನಿಸಿ : ಮಾರ್ಚ್ 1 ರಿಂದ ಬದಲಾಗಲಿವೆ ಈ ನಿಯಮಗಳು!

ಮಾರ್ಚ್ 1ರಿಂದ ಹಲವು ನಿಯಮಗಳು ಬದಲಾಗಲಿದ್ದು, ಇದು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ. ಕೆಲವು ಬ್ಯಾಂಕ್ʼಗಳಿಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತಿವೆ. ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನ ಸರಿಯಾದ ಸಮಯಕ್ಕೆ ಮಾಡದಿದ್ರೆ, ನಿಮ್ಮ ಖಾತೆಯನ್ನೂ ಮುಚ್ಚಬಹುದು. ಈ ಬಗ್ಗೆ ಬ್ಯಾಂಕ್ʼಗಳು ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

ಇ-ವಿಜಯಾ ಮತ್ತು ಇ-ದೇನಾ ಸಂಸ್ಥೆಯ ಐಎಫ್ ಎಸ್ ಸಿ ಕೋಡ್ʼಗಳು 2021ರ ಮಾರ್ಚ್ 1ರಿಂದ ಮುಚ್ಚಲಾಗುವುದು ಎಂದು ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಇನ್ನು ಹೊಸ IFSC ಕೋಡ್ ಪಡೆಯುವುದು ಕೂಡ ತುಂಬಾ ಸುಲಭ ಎಂದಿದೆ. ಅದ್ರಂತೆ, ಗ್ರಾಹಕರು ಹೊಸ ಕೋಡ್ʼಗಳಿಗಾಗಿ ಬ್ಯಾಂಕಿನ ವೆಬ್ ಸೈಟ್ʼಗೆ ಹೋಗಿ ಅಥವಾ ಮೆಸೇಜ್ʼಗೆ ಮೊರೆ ಹೋಗುವಂತೆ ಗ್ರಾಹಕನಿಗೆ ಸೂಚಿಸಿದ್ದಾರೆ. ಇದಕ್ಕೆ 18002581700 ಟೋಲ್ ಫ್ರೀ ನಂಬರ್ ಕೂಡ ಬ್ಯಾಂಕ್ ನೀಡಿದೆ. ಹೊಸ IFSC ಕೋಡ್ʼಗಾಗಿ ಬ್ಯಾಂಕ್ʼನಿಂದ 8422009988 ಮೊಬೈಲ್ ಸಂಖ್ಯೆಯನ್ನ ನೀಡಲಾಗಿದೆ.

ಈ ಬ್ಯಾಂಕ್ʼಗಳ ನಿಯಮಗಳಲ್ಲಿ ಬದಲಾವಣೆ..!
ಬ್ಯಾಂಕ್ ಆಫ್ ಬರೋಡಾ ಅಲ್ಲದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಐಎಫ್ ಎಸ್ ಸಿ ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಸಹವರ್ತಿ ಬ್ಯಾಂಕ್ʼಗಳ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಹಳೆಯ ಚೆಕ್ ಬುಕ್ ಮತ್ತು IFSC ಅಥವಾ MICR ಕೋಡ್ʼನ್ನ ಬದಲಿಸಲಿದೆ. ಅದ್ರಂತೆ, ಮಾರ್ಚ್ 31ರೊಳಗೆ ಗ್ರಾಹಕರಿಗೆ ಹೊಸ ಕೋಡ್ʼಗಳನ್ನ ಪಡೆಯಿರಿ, ಇಲ್ಲದಿದ್ದರೆ ಮುಂದೆ ಸಮಸ್ಯೆ ಉಂಟಾಗಬಹುದು. ಮಾರ್ಚ್ 31ರ ವರೆಗೆ ಹೊಸ IFSC ಕೋಡ್ ಮತ್ತು ಚೆಕ್ ಬುಕ್ ಪಡೆಯಲು ಪಿಎನ್ ಬಿ ಗ್ರಾಹಕರಿಗೆ ಒಂದು ಟ್ವೀಟ್ ಕಳುಹಿಸಿದೆ.

ಮಾರ್ಚ್ʼನಲ್ಲಿ ಅನೇಕ ರಜೆಗಳು..!
ರಜಾ ದಿನಗಳ ಬಗ್ಗೆ ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಪ್ರಮುಖ ಕೆಲಸಗಳನ್ನ ನಿರ್ವಹಿಸಬೇಕಾದವರು ರಜಾ ದಿನದ ಈ ದಿನಗಳ ಬಗ್ಗೆ ಸಂಪೂರ್ಣ ನಿಗಾ ವಹಿಸಬೇಕು. ಮಾರ್ಚ್ 5, 11 ಮಾರ್ಚ್, 22 ಮಾರ್ಚ್, 29 ಮಾರ್ಚ್ ಮತ್ತು 30 ಮಾರ್ಚ್ ನಲ್ಲಿ ರಜೆಗಳು ಇರುತ್ತವೆ. ಇದರ ಹೊರತಾಗಿ ಮಾರ್ಚ್ ತಿಂಗಳಲ್ಲಿ 4 ಭಾನುವಾರ ಮತ್ತು 2 ಶನಿವಾರಗಳು ಇರುವುದರಿಂದ ಯಾವುದೇ ಅಧಿಕೃತ ಕೆಲಸ ಇರುವುದಿಲ್ಲ. ಒಟ್ಟಾರೆ ಮಾರ್ಚ್ 11 ದಿನದ ರಜೆಯಾಗಿದ್ದು, ಮಾರ್ಚ್ 1 ರಿಂದ 5ರವರೆಗೆ ಜನರು ಎಲ್ಲಾ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಬೇಕು. ಹೋಳಿ ಮತ್ತು ಮಹಾಶಿವರಾತ್ರಿಯೂ ಮಾರ್ಚ್ ತಿಂಗಳು ಬರೋದ್ರಿಂದ ಆ ದಿನವೂ ರಜೆ ಇರುತ್ತದೆ.

ಆಧಾರ್-ಖಾತೆ ಲಿಂಕ್ ಮಾಡುವುದು..!
2021ರ ಮಾರ್ಚ್ 31ರೊಳಗೆ ಎಲ್ಲ ಬ್ಯಾಂಕ್ʼಗಳು ತಮ್ಮ ಆಧಾರ್ ಕಾರ್ಡ್ʼನೊಂದಿಗೆ ಲಿಂಕ್ ಮಾಡುವುದು ಅಗತ್ಯ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಹಣಕಾಸು ಸೇರ್ಪಡೆಗೆ ಆಧಾರ್ ಮತ್ತು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವುದು ಮತ್ತು ಸರ್ಕಾರದ ಯೋಜನೆಗಳ ಪ್ರಯೋಜನವನ್ನ ಜನರಿಗೆ ನೀಡಲು ಅಗತ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಾರ್ಚ್ 31ರವರೆಗೆ ಎಲ್ಲ ಬ್ಯಾಂಕ್ ಖಾತೆಗಳಿಗೆ ಮತ್ತು ಆಧಾರ್ ಲಿಂಕ್ ಮಾಡಬೇಕು ಎಂದು ಹಣಕಾಸು ಸಚಿವಾಲಯ ಸೂಚನೆ ನೀಡಿದೆ.

TRENDING