Tuesday, April 13, 2021
Home ಸುದ್ದಿ ಜಾಲ ಅಧಿಕಾರಕ್ಕೆ ಬಂದಾಗಿನಿಂದಲೂ ಸಂಕಷ್ಟಗಳ‌ ಸರಮಾಲೆಯನ್ನೇ‌ ಎದುರಿಸಿದ್ದೇವೆ: ಗೋವಿಂದ ಕಾರಜೋಳ

ಇದೀಗ ಬಂದ ಸುದ್ದಿ

ಅಧಿಕಾರಕ್ಕೆ ಬಂದಾಗಿನಿಂದಲೂ ಸಂಕಷ್ಟಗಳ‌ ಸರಮಾಲೆಯನ್ನೇ‌ ಎದುರಿಸಿದ್ದೇವೆ: ಗೋವಿಂದ ಕಾರಜೋಳ

 ಹಾಸನ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಳೊಂದಿಗೆ ಮಾತನಾಡಿದ ಡಿಸಿಎಂ’ಯಡಿಯೂರಪ್ಪನವ್ರ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ‌ ಕೂಡಲೇ ಪ್ರವಾಹದಿಂದ 35 ಸಾವಿರ ಕೋಟಿ ರೂಪಾಯಿ‌ ಹಾನಿಯಾಯ್ತು. ರಸ್ತೆ , ಮನೆ, ಸಾರ್ವಜನಿಕ ಆಸ್ತಿ‌ಪಾಸ್ತಿಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾದವು. 2020 – 2021 ಸಾಲಿನಲ್ಲಿ ಮತ್ತೆ ಮಳಿಯಿಂದ 25 ಸಾವಿರ ಕೋಟಿ ರೂಪಾಯಿಗಳ‌ ನಷ್ಟ ಉಂಟಾಯಿತು. ಕಳೆದ ವರ್ಷ ಜನವರಿಯಿಂದ ಕೊರೊನಾ ಸಂಕಷ್ಟ ಎದುರಾಯ್ತು. ಕೊರೊನಾದಿಂದ ವ್ಯಾಪಾರಸ್ಥರು, ಜನಸಾಮಾನ್ಯರು ಸಂಕಷ್ಟ ಅನುಭವಿಸಿದರು. ಸವಾಲುಗಳ ಮಧ್ಯೆ ಸರ್ಕಾರ ಜನರಿಗೆ ಹೆಚ್ಚು ತೊಂದರೆ ಆಗದಂತೆ ನಿರ್ವಹಣೆ ಮಾಡಿದೆ’ ಅಂತಾ ಹೇಳಿದರು.

TRENDING