Saturday, April 17, 2021
Home ಕೋವಿಡ್-19 ಕರ್ನಾಟಕದಲ್ಲಿ ಇಂದು 453 ಕೊರೊನಾ ಸೋಂಕಿತರು ಪತ್ತೆ, 7 ಮಂದಿ ಬಲಿ

ಇದೀಗ ಬಂದ ಸುದ್ದಿ

ಕರ್ನಾಟಕದಲ್ಲಿ ಇಂದು 453 ಕೊರೊನಾ ಸೋಂಕಿತರು ಪತ್ತೆ, 7 ಮಂದಿ ಬಲಿ

ಬೆಂಗಳೂರು,ಫೆ. 26: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಪ್ರಕರಣ ಕೊಂಚ ಏರಿಕೆಯಾಗಿದೆ. ಇಂದು 453 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಂದೇ ದಿನದಲ್ಲಿ 947 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಇದುವರೆಗೆ 931725 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

5576 ಸಕ್ರಿಯ ಪ್ರಕರಣಗಳಿವೆ, ಒಂದೇ ದಿನ 07 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 12316 ಮಂದಿ ಸಾವನ್ನಪ್ಪಿದ್ದಾರೆ. 949636 ಪ್ರಕರಣಗಳಿವೆ, 121 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆ 3,ಬಳ್ಳಾರಿ 9,ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 7,ಬೆಂಗಳೂರು ನಗರ 271, ಬೀದರ್ 6, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 4, ದಕ್ಷಿಣ ಕನ್ನಡ 24, ದಾವಣಗೆರೆ 1,ಧಾರವಾಡ 6,ಗದಗ 2,ಹಾಸನ 7,ಕಲಬುರಗಿ 12,ಕೊಡಗು 7, ಕೋಲಾರ 2, ಮಂಡ್ಯ 4, ಮೈಸೂರು 27,ರಾಯಚೂರು 2, ಶಿವಮೊಗ್ಗ 5, ತುಮಕೂರು 24,ಉಡುಪಿ 12,ಉತ್ತರ ಕನ್ನಡ 2,ವಿಜಯಪುರದಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.

TRENDING