Tuesday, April 13, 2021
Home ಅಂತರ್ ರಾಷ್ಟ್ರೀಯ ಚೀನಾ ಬಡತನ ನಿರ್ಮೂಲನೆಯಲ್ಲಿ 'ಸಂಪೂರ್ಣ ವಿಜಯ' ಸಾಧಿಸಿದೆ: ಕ್ಸಿ ಜಿನ್‌ಪಿಂಗ್

ಇದೀಗ ಬಂದ ಸುದ್ದಿ

ಚೀನಾ ಬಡತನ ನಿರ್ಮೂಲನೆಯಲ್ಲಿ ‘ಸಂಪೂರ್ಣ ವಿಜಯ’ ಸಾಧಿಸಿದೆ: ಕ್ಸಿ ಜಿನ್‌ಪಿಂಗ್

 ಬೀಜಿಂಗ್: ಕಳೆದ ನಾಲ್ಕು ದಶಕಗಳಲ್ಲಿ 770 ಮಿಲಿಯನ್ ಜನರನ್ನು ಬಡತನ ಮುಕ್ತಗೊಳಿಸುವ ಮೂಲಕ ಚೀನಾ ಬಡತನದ ವಿರುದ್ಧದ ಹೋರಾಟದಲ್ಲಿ “ಸಂಪೂರ್ಣ ಜಯ” ಗಳಿಸಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ ಘೋಷಿಸಿದ್ದಾರೆ, ಇದು ದೇಶವು ಮಾಡಿರುವ ಮತ್ತೊಂದು “ಪವಾಡ” ಎಂದು ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಅವರು ಹೇಳಿದ್ದಾರೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗಿದೆ ಬಡತನ ನಿವಾರಣೆಯಲ್ಲಿ ದೇಶದ ಸಾಧನೆಗಳನ್ನು ಗುರುತಿಸಲು ಮತ್ತು ಅದರ ಮಾದರಿ ಬಡತನ ಹೋರಾಟಗಾರರನ್ನು ಗೌರವಿಸಲು ನಡೆದ ಸಭೆಯನ್ನುದ್ದೇಶಿಸಿ ಕ್ಸಿ ಘೋಷಿಸಿದರು.

ಚೀನಾದಲ್ಲಿ ಸುಮಾರು 1.4 ಬಿಲಿಯನ್ ಜನಸಂಖ್ಯೆ ಇದೆ. ಗ್ರಾಮೀಣ ಪ್ರದೇಶದ ಎಲ್ಲ ಬಡ ಜನರನ್ನು ಬಡತನಮುಕ್ತಗೊಳಿಸಲಾಗಿದೆ ಎಂದು ಕ್ಸಿ ಹೇಳಿದರು. ಇದರೊಂದಿಗೆ ಚೀನಾ ಬಡತನ ನಿರ್ಮೂಲನೆ ಮಾಡುವ ಯುಎನ್ ಗುರಿ 2030ನ್ನು 10 ವರ್ಷಗಳ ಮುಂಚಿತವಾಗಿ ಸಾಧಿಸಿದೆ ಎಂದು ಅವರು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ, ಪ್ರಸ್ತುತ ಬಡತನ ರೇಖೆಯಡಿಯಲ್ಲಿ ವಾಸಿಸುತ್ತಿರುವ ಅಂತಿಮ 98.99 ಮಿಲಿಯನ್ ಬಡ ಗ್ರಾಮೀಣ ನಿವಾಸಿಗಳಾಗಿದ್ದು ಅವರೆಲ್ಲರನ್ನೂ ಬಡತನ ರೇಖೆಗಿಂತ ಮೇಲೆತ್ತಲಾಗಿದೆ ಎಲ್ಲಾ 832 ಬಡ ಕೌಂಟಿಗಳು ಮತ್ತು 128,000 ಬಡ ಗ್ರಾಮಗಳನ್ನು ಬಡತನ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದರು.

ಇದೇ ವೇಳೆ ಚೀನಾ ಜಾಗತಿಕ ಬಡತನ ನಿವಾರಣೆಗೆ ಶೇ 70 ಕ್ಕಿಂತ ಹೆಚ್ಚು ಕೊಡುಗೆ ನೀಡಿದೆ ಎಂದು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಪ್ರಧಾನ ಕಾರ್ಯದರ್ಶಿ ಕ್ಸಿ ಹೇಳಿದ್ದಾರೆ. ಅಂತಹ ಸಾಧನೆಗಳೊಂದಿಗೆ, ಚೀನಾ ಮತ್ತೊಂದು “ಪವಾಡ” ವನ್ನು ಸೃಷ್ಟಿಸಿದೆ, ಅದು “ಇತಿಹಾಸದಲ್ಲಿ ಉಳಿಯುತ್ತದೆ” ಎಂದು ಅವರು ಹೇಳಿದರು. ಕ್ಸಿ ಅಧಿಕಾರ ವಹಿಸಿಕೊಂಡಾಗಿನಿಂದ, ಚೀನಾ ಬಡತನ ನಿವಾರಣೆಗೆ ಸುಮಾರು 1.6 ಟ್ರಿಲಿಯನ್ ಯುವಾನ್ (ಸುಮಾರು 246 ಬಿಲಿಯನ್ ಯುಎಸ್ ಡಾಲರ್) ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ವಿಶ್ವ ಬ್ಯಾಂಕಿನ ಅಂತರರಾಷ್ಟ್ರೀಯ ಬಡತನ ರೇಖೆಯ ಪ್ರಕಾರ, ಕಳೆದ 40 ವರ್ಷಗಳಲ್ಲಿ ಚೀನಾದ ಜನರು ಬಡತನದಿಂದ ಬಿಡುಗಡೆಯಾದವರ ಸಂಖ್ಯೆ ಜಾಗತಿಕ ಮಟ್ಟದ ಶೇ.70 ಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ.

ಚೀನಾದಲ್ಲಿ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು 2012 ರ ಅಂತ್ಯದ ವೇಳೆಗೆ ಕ್ಸಿ ಅಧಿಕಾರಕ್ಕೆ ಬಂದಾಗ ಘೋಷಿಸಿದ ಮುಖ್ಯ ಘೋಷಣೆ ಆಗಿತ್ತು. ಆ ಸಮಯದಲ್ಲಿ ಚೀನಾದಲ್ಲಿ ಸುಮಾರು 100 ಮಿಲಿಯನ್ ಬಡ ಜನರು ಇದ್ದರು, ಹೆಚ್ಚಾಗಿ ದೂರದ ಗ್ರಾಮೀಣ ಭಾಗಗಳಲ್ಲಿ ಅವರು ವಾಸಿಸುತ್ತಿದ್ದರು.

ಗುರುವಾರ ತಮ್ಮ ಭಾಷಣದಲ್ಲಿ, ಕ್ಸಿ ಬಡತನವನ್ನು ಹೋಗಲಾಡಿಸುವುದು ಅಂತಿಮ ಗುರಿಯಲ್ಲ ಆದರೆ ಹೊಸ ಜೀವನ ಮತ್ತು ಹೊಸ ಪ್ರಯತ್ನದ ಪ್ರಾರಂಭದ ಹಂತವಾಗಿದೆ ಎಂದು ಹೇಳಿದರು. ಸಿಪಿಸಿ ಸ್ಥಾಪನೆಯಾದಾಗಿನಿಂದ ಜನರ ಜೀವನೋಪಾಯವನ್ನು ಸುಧಾರಿಸಲು ಕೆಲಸ ಮಾಡುತ್ತಿದೆ ಮತ್ತು 2012 ರಲ್ಲಿ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಪ್ರತಿವರ್ಷ ಸರಾಸರಿ 10 ದಶಲಕ್ಷ ಬಡ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ ಎಂದು ಕ್ಸಿ ಹೇಳಿದರು.

TRENDING