Tuesday, April 13, 2021
Home ಸುದ್ದಿ ಜಾಲ ಡಿ.ಕೆ.ಶಿ ಎದುರೇ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕೂಗಿದ ಅಭಿಮಾನಿಗಳು

ಇದೀಗ ಬಂದ ಸುದ್ದಿ

ಡಿ.ಕೆ.ಶಿ ಎದುರೇ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕೂಗಿದ ಅಭಿಮಾನಿಗಳು

ಬೆಂಗಳೂರು: ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷದ ಸಹ ಸದಸ್ಯರಾಗಿ ಸೇರ್ಪಡೆಯಾಗುವ ಕಾರ್ಯಕ್ರಮ ನಡೆಯುತ್ತಿತ್ತು. ಇದ್ರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲೇ ಸಿದ್ದರಾಮಯ್ಯ ಅಭಿಮಾನಿಗಳು, ʼಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈʼ ಎಂದು ಘೋಷಣೆ ಕೂಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನ್ವರು ಭಾಷಣ ಮಾಡಿ ಮುಗಿಸುತ್ತಿದ್ದಂತೆ, ಅಭಿಮಾನಿಗಳು ಘೋಷಣೆ ಕೂಗಲು ಶುರು ಮಾಡಿದ್ರು. ಆದ್ರೆ, ಸಿದ್ದರಾಮಯ್ಯ ಕೂಡಲೇ ಅಭಿಮಾನಿಗಳನ್ನ ತಡೆದು, ಏ ಸುಮ್ಮನಿರಿ. ಆಗೆಲ್ಲಾ ಕೂಗಬಾರದು ಎಂದರು. ಆ ಬಳಿಕ ವೇದಿಕೆಯಲ್ಲಿದ್ದ ಎಲ್ಲ ನಾಯಕರೂ ಘೋಷಣೆ ಕೂಗದಂತೆ ತಡೆದರು.

ಅಂದ್ಹಾಗೆ, ಕಾಂಗ್ರೆಸ್​ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಬಗ್ಗೆ ತೀವ್ರ ಚರ್ಚೆವಾಗ್ತಿದೆ. ಹಲವು ನಾಯಕರು ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿದ್ರೆ, ಮತ್ತೆ ಹಲವರು ಡಿ.ಕೆ. ಶಿವಕುಮಾರ್ ಎನ್ನುತ್ತಿದ್ರು. ಈ ಬೆಳವಣಿಗೆಗಳ ಬೆನ್ನಲ್ಲೇ ಯಾರೂ ಇಂತಹ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್​ ಶಿಸ್ತು ಸಮಿತಿ ನೋಟಿಸ್​ ಕೂಡ ನೀಡಿತ್ತು.

TRENDING