Tuesday, April 13, 2021
Home ಸುದ್ದಿ ಜಾಲ ರಾಹುಲ್ ಗಾಂಧಿ ಮೇಲೆ ಹರಿಹಾಯ್ದ ಕೇರಳ ಸಿಎಂ

ಇದೀಗ ಬಂದ ಸುದ್ದಿ

ರಾಹುಲ್ ಗಾಂಧಿ ಮೇಲೆ ಹರಿಹಾಯ್ದ ಕೇರಳ ಸಿಎಂ

ತಿರುವನಂತಪುರಂ: ನಿನ್ನೆಯಷ್ಟೇ ಕೇರಳ ಪ್ರವಾಸದಲ್ಲಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೀನುಗಾರರೊಂದಿಗೆ ಸಮುದ್ರಕ್ಕೆ ಹಾರಿ, ಈಜಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು. ಅವರು ಕೇರಳ ಪ್ರವಾಸ ಮುಗಿಸಿಕೊಂಡು ಹೋದ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಹುಲ್ ಮೇಲೆ ಹರಿಹಾಯ್ದಿದ್ದಾರೆ.

‘ಕೇರಳಕ್ಕೆ ಬಂದು ಟ್ರ್ಯಾಕ್ಟರ್ ಓಡಿಸುವುದು ಹಾಗೂ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜುವುದನ್ನು ಮಾಡುವುದರಲ್ಲಿ ಮಗ್ನರಾದ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಸಂಪೂರ್ಣ ಮರೆತಿದ್ದಾರೆ’ ಎಂದು ಆರೋಪಿಸಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ. ರೈತ ಪ್ರತಿಭಟನೆ ಬಗ್ಗೆ ರಾಹುಲ್ ಅವರು ಗಮನ ಹರಿಸಬೇಕು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮೀನುಗಾರಿಕೆಗೆ ಸಚಿವಾಲಯ ಇಲ್ಲ ಎಂದು ಟ್ರೋಲ್​ಗೆ ಒಳಗಾಗಿದ್ದ ರಾಹುಲ್, ಇಂದು ಮೌನ ಮುರಿದಿದ್ದಾರೆ. ‘ನಾನು ಹೇಳಿದ್ದು ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಬೇಕು ಅಂತಾ, ಸಚಿವಾಲಯಕ್ಕೂ, ವಿಭಾಗಕ್ಕೂ ಕೆಲವರಿಗೆ ವ್ಯತ್ಯಾಸ ಗೊತ್ತಿಲ್ಲ’ ಎಂದು ಟ್ವೀಟ್ ಮಾಡುವ ಮೂಲಕ ಹೇಳಿದ್ದಾರೆ. ಬೆಳಿಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋದಿ ಅವರು, ‘ಕಾಂಗ್ರೆಸ್ ನಾಯಕ ಮೀನುಗಾರಿಕೆಗೆ ಸಚಿವಾಲಯ ಇಲ್ಲ ಎಂದು ಹೇಳಿದ್ದು ನನಗೆ ಆಶ್ಚರ್ಯ ತರಿಸಿತ್ತು. 2019 ರಲ್ಲೇ ಸಚಿವಾಲಯ ಹುಟ್ಟಿಹಾಕಲಾಗಿದೆ’ ಎಂದಿದ್ದರು.

TRENDING