Saturday, April 17, 2021
Home ಕ್ರಿಕೆಟ್ IND vs ENG 2ನೇ ಟೆಸ್ಟ್‌ ಪಂದ್ಯ : ಭಾರತದ ಭರವಸೆಯ ಬೌಲರ್ ಆರ್. ಅಶ್ವಿನ್...

ಇದೀಗ ಬಂದ ಸುದ್ದಿ

IND vs ENG 2ನೇ ಟೆಸ್ಟ್‌ ಪಂದ್ಯ : ಭಾರತದ ಭರವಸೆಯ ಬೌಲರ್ ಆರ್. ಅಶ್ವಿನ್ ಮತ್ತೊಂದು ದಾಖಲೆ

 ಭಾರತದ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಟೆಸ್ಟ್ ಪಂದ್ಯಗಳಲ್ಲಿ 400 ವಿಕೆಟ್ ಗಳಿಸುವ ಮೂಲಕ ಗಮನಸೆಳೆದಿದ್ದಾರೆ. 400 ವಿಕೆಟ್ ಗಳ ಕ್ಲಬ್ ಸೇರಿದ ಭಾರತದ ನಾಲ್ಕನೇ ಬೌಲರ್ ಎಂಬ ಹಿರಿಮೆಗೆ ಆರ್. ಅಶ್ವಿನ್ ಪಾತ್ರರಾಗಿದ್ದಾರೆ.

ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. ಅತಿ ವೇಗವಾಗಿ 400 ವಿಕೆಟ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದು, ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಭಾರತದ ಪರವಾಗಿ ಅನಿಲ್ ಕುಂಬ್ಳೆ 619 ವಿಕೆಟ್, ಕಪಿಲ್ ದೇವ್ 434, ಹರ್ಭಜನ್ ಸಿಂಗ್ 417 ವಿಕೆಟ್ ಪಡೆದಿದ್ದಾರೆ. 77 ನೇ ಟೆಸ್ಟ್ ಪಂದ್ಯದ 144ನೇ ಇನಿಂಗ್ಸ್ ನಲ್ಲಿ ಆರ್. ಅಶ್ವಿನ್ 400 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. ಅವರು 29 ಸಲ ಐದು ವಿಕೆಟ್ ಗೊಂಚಲು ಪಡೆದಿದ್ದು, ಪಂದ್ಯವೊಂದರಲ್ಲಿ 7 ಸಲ 10 ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್ ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.

TRENDING