Tuesday, April 13, 2021
Home ಜಿಲ್ಲೆ ವಿಜಯಪುರ ವಿಧವಾ ವೇತನ ನೀಡಲು 3 ಸಾವಿರ ರೂ ಲಂಚ ಪಡೆಯುತ್ತಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

ಇದೀಗ ಬಂದ ಸುದ್ದಿ

ವಿಧವಾ ವೇತನ ನೀಡಲು 3 ಸಾವಿರ ರೂ ಲಂಚ ಪಡೆಯುತ್ತಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

ವಿಜಯಪುರ : ವಿಧವಾ ವೇತನ ನೀಡಲು 3 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಲೆಕ್ಕಿಗನೊಬ್ಬ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾನೆ.

ರೋಣಿಹಾಳ ಗ್ರಾಮದ ಕಾಶಿನಾಥ ಬಡಿಗೇರ ತಮ್ಮ ತಾಯಿ ರೇಖಾ ಬಡಿಗೇರ ಇವರ ಪರವಾಗಿ ವಿಧವಾ ವೇತನ ಹಾಗೂ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಶಿಫಾರಸು ಮಾಡಲು ರೋಣಿಹಾಳ ಗ್ರಾಮಲೆಕ್ಕಿಗ ಬಸವರಾಜ ಮಲ್ಲಪ್ಪಗೋಳ ಅರ್ಜಿದಾರರಿಗೆ 3 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇರಿಸಿದ್ದರು.

ಅದರಂತೆ ಬಸವನಬಾಗೇವಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರದ ರಸ್ತೆಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದ. ಈ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಸಿಬಿ ವಿಜಯಪುರ ಡಿಎಸ್ಪಿ ಎಂ.ಕೆ.ಗಂಗಲ್ ನೇತೃತ್ವದಲ್ಲಿ ಸಿಪಿಐ ಹರಿಶ್ಚಂದ್ರ, ಪಿ.ಬಿ.ಕವಟಗಿ, ಸಿಬ್ಬಂದಿ ಗಳಾದ ಅಶೋಕ ಸಿಂಧೂರ, ಸುರೇಶ ಜಾಲಗೇರಿ, ಎ.ಐ.ಶೇಖ, ಎಸ್.ಎಸ್.ಮುಂಜೆ, ಸದಾಶಿವ ಕೋಟ್ಯಾಳ, ಮಾಳಪ್ಪ ಸಲಗೊಂಡ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

TRENDING