Tuesday, April 13, 2021
Home ಸುದ್ದಿ ಜಾಲ ಕೇಂದ್ರದಿಂದ `ಆಯುಷ್ಮಾನ್ ಭಾರತ್' ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

ಕೇಂದ್ರದಿಂದ `ಆಯುಷ್ಮಾನ್ ಭಾರತ್’ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ : ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಅಡಿಯಲ್ಲಿ ಫಲಾನುಭವಿಗಳು ಇನ್ನು ಮುಂದೆ ಉಚಿತವಾಗಿ ಕಾರ್ಡ್ ಗಳನ್ನು ಪಡೆಯಬಹುದು.

ಹೌದು, ದೇಶಾದ್ಯಂತ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್ ಸಿ) ಅಡಿಯಲ್ಲಿ ಗ್ರಾಮೀಣ ಮಟ್ಟದ ಉದ್ದಿಮೆದಾರರ ಕ್ಷೇತ್ರ ಮಟ್ಟದ ಆಪರೇಟರ್ ಗಳಿಗೆ ಇದುವರೆಗೆ ಪಾವತಿಸಲು ಫಲಾನುಭವಿಗಳು ಪಾವತಿಸಬೇಕಿದ್ದ ಪ್ರತಿ ಕಾರ್ಡ್ ಗೆ 30 ರೂ. ಶುಲ್ಕವನ್ನು ಸರ್ಕಾರ ಮನ್ನಾ ಮಾಡಿದೆ. ಆದಾಗ್ಯೂ, ನಕಲಿ ಕಾರ್ಡ್ ಅಥವಾ ಮರುಮುದ್ರಣಗಳನ್ನು ನೀಡಲು, ತೆರಿಗೆಗಳನ್ನು ಹೊರತುಪಡಿಸಿ, 15 ರೂ. ಅನ್ನು ಫಲಾನುಭವಿ ಶುಲ್ಕ ಪಾವತಿಸಬೇಕಿದೆ.

ಆಯುಷ್ಮಾನ್ ಕಾರ್ಡ್ ಗಳನ್ನು ಸಂಪೂರ್ಣ ಉಚಿತವಾಗಿ ವಿತರಿಸಿದ್ದು, ಕಾಗದ ಆಧಾರಿತ ಕಾರ್ಡ್ ಗಳನ್ನು ಬದಲಾಯಿಸಿ, ಫಲಾನುಭವಿಗಳು ಸುಲಭವಾಗಿ ಮನೆಯಲ್ಲಿಯೇ ಸಂಗ್ರಹಿಸಿಡಲು ಸಾಧ್ಯವಾಗಲಿದೆ’ ಎಂದು ಎನ್ ಎಚ್ ಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮ್ ಸೆವಾಕ್ ಶರ್ಮಾ ತಿಳಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಆಯುಷ್ಮಾನ್ ಯೋಜನೆ ಫಲಾನುಭವಿಗಳು ಸುಲಭವಾಗಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಕಲ್ಪಿಸಿದೆ. ದೇಶದ 10 ಕೋಟಿ ಬಡ ಕುಟುಂಬಗಳಿಗೆ ಕ್ಯಾನ್ಸರ್ ಸೇರಿದಂತೆ 1300ಕ್ಕೂ ಹೆಚ್ಚು ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ವೆಚ್ಚದವರೆಗೂ ಚಿಕಿತ್ಸೆ ನೀಡಲಾಗುತ್ತದೆ.

TRENDING