Saturday, April 17, 2021
Home ಸುದ್ದಿ ಜಾಲ ತಿರುಪತಿ ತಿರುಮಪ್ಪನಿಗೆ ₹2 ಕೋಟಿ ಮೌಲ್ಯದ ಚಿನ್ನದ ಆಭರಣ ಅರ್ಪಿಸಿದ ತಮಿಳುನಾಡಿನ ಭಕ್ತ

ಇದೀಗ ಬಂದ ಸುದ್ದಿ

ತಿರುಪತಿ ತಿರುಮಪ್ಪನಿಗೆ ₹2 ಕೋಟಿ ಮೌಲ್ಯದ ಚಿನ್ನದ ಆಭರಣ ಅರ್ಪಿಸಿದ ತಮಿಳುನಾಡಿನ ಭಕ್ತ

 ಆಂಧ್ರ ಪ್ರದೇಶ : ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ ತಮಿಳುನಾಡು ಮೂಲದ ಭಕ್ತರೊಬ್ಬರು ₹2 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ಅರ್ಪಿಸಿದ್ದಾರೆ.

ತಮಿಳುನಾಡಿನ ಥೇನಿಯ ಭಕ್ತ ಥಂಗದೊರೈ ಪೂಜೆಯ ಬಳಿಕ ಚಿನ್ನದ ಶಂಕು ಮತ್ತು ಚಕ್ರವನ್ನು ದೇವಾಲಯದ ಆಡಳಿತ ಮಂಡಳಿಗೆ ನೀಡಿದ್ದಾರೆ. ಚಿನ್ನದ ಕಾಣಿಕೆಗಳ ತೂಕ 3.5 ಕೆ.ಜಿ. ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌-19 ಲಾಕ್‌ಡೌನ್‌ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಭಕ್ತಾದಿಯು ಗುಣಮುಖರಾಗಲು ಪ್ರಾರ್ಥನೆ ಸಲ್ಲಿಸಿ, ಚಿನ್ನದ ಆಭರಣಗಳನ್ನು ಅರ್ಪಿಸುವ ಹರಕೆಯೊತ್ತಿದ್ದರು. ಅವರು ಗುಣಮುಖರಾಗಿದ್ದು, ಹರಕೆ ತೀರಿಸುವ ಸಲುವಾಗಿ ಇದನ್ನು ಅರ್ಪಿಸಿದ್ದಾರೆ ಎಂದು ಭಕ್ತಾದಿ ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.

TRENDING