Saturday, April 17, 2021
Home ಸುದ್ದಿ ಜಾಲ ಕರುಣೆ ಬಂದಾಗ ಮೀಸಲಾತಿ ಕೊಡಲಿ : ಅಲ್ಲಿಯವರೆಗೂ ಹೋರಾಟ ನಿಲ್ಲದು - ಜಯಮೃತ್ಯುಂಜಯ ಸ್ವಾಮೀಜಿ

ಇದೀಗ ಬಂದ ಸುದ್ದಿ

ಕರುಣೆ ಬಂದಾಗ ಮೀಸಲಾತಿ ಕೊಡಲಿ : ಅಲ್ಲಿಯವರೆಗೂ ಹೋರಾಟ ನಿಲ್ಲದು – ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಸವ ಜಯಮೃತ್ಯುಂಜಯ ಸ್ವಾಮಿಜಿ, ಕರುಣೆ ಬಂದಾಗ ನಮಗೆ ಮೀಸಲಾತಿ ಕೊಡಲಿ ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಹೆಳಿದ್ದಾರೆ.

ಪಂಚಮಸಾಲಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ, ಬೃಹತ್ ಸಮಾವೇಶದ ಬಳಿಕ ಇದೀಗ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಆರಂಭಿಸಿದ್ದು, ಪಂಚಮಸಾಲಿಗಳ ಬೇಡಿಕೆಗೆ ಒಪ್ಪದ ರಾಜ್ಯ ಸರ್ಕಾರ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸರ್ಕಾರಕ್ಕೆ ಕರುಣೆ ಬಂದಾಗ ಮೀಸಲಾತಿ ನೀಡಲಿ. ಮಾರ್ಚ್ ನಾಲ್ಕರ ಬಳಿಕ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಮೀಸಲಾತಿಗಾಗಿ ಹೋರಾಟ ಸಧ್ಯದಲ್ಲೇ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

TRENDING