Tuesday, April 13, 2021
Home ಸುದ್ದಿ ಜಾಲ `EPFOʼ ಉದ್ಯೋಗಿಗಳಿಗೆ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

`EPFOʼ ಉದ್ಯೋಗಿಗಳಿಗೆ ಮಹತ್ವದ ಮಾಹಿತಿ

  ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ ಒ) ಸದಸ್ಯರ ಪ್ರೊಫೈಲ್ʼನಲ್ಲಿ ಬದಲಾವಣೆ ಮಾಡುವ ಕುರಿತು ಹೊಸ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಇಪಿಎಫ್ ಒ ಪ್ರಕಾರ, ಈಗ ಸದಸ್ಯರು ತಮ್ಮ ಪ್ರೊಫೈಲ್ʼನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನ ಆನ್ಲೈನ್ʼನಲ್ಲಿ ಮಾಡಲು ಸಾಧ್ಯವಾಗುವುದಿಲ್ಲ.

ಹೌದು, ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಪಿಎಫ್ ಒ ಈ ನಿರ್ಧಾರ ಕೈಗೊಂಡಿದ್ದು, ನೌಕರರಿಗೆ ಸಹಾಯ ಮಾಡಲು ಉದ್ದೇಶ ಹೊಂದಿದೆ. ಅದ್ರಂತೆ, ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ ಇತ್ಯಾದಿ ಆನ್ಲೈನ್ ತಿದ್ದುಪಡಿ ವ್ಯವಸ್ಥೆಯನ್ನ ಇಪಿಎಫ್ ಒ ಸುಲಭ ಮಾಡಿತ್ತು.

ವಾಸ್ತವವಾಗಿ, ಸದಸ್ಯರ ಪ್ರೊಫೈಲ್ʼನಲ್ಲಿ ಹೆಸರನ್ನ ಸಂಪೂರ್ಣವಾಗಿ ಬದಲಾಯಿಸಿದ ಅಥವಾ ಪ್ರೊಫೈಲ್ ಅನ್ನ ಸಂಪೂರ್ಣವಾಗಿ ಬದಲಿಸಿದ ನಂತರ ವಂಚನೆ ಅಥವಾ ಮಿಸ್ಮ್ಯಾಚ್ ಪ್ರಕರಣಗಳು ಬರುತ್ತಲೇ ಇದ್ದವು. ಹಾಗಾಗಿ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಈ ಸಮಸ್ಯೆಯನ್ನ ನಿವಾರಿಸಬೇಕೆಂದು ಇಪಿಎಫ್ ಒ ನಿರ್ಧರಿಸಿದೆ. ಅದ್ರಂತೆ, ಸಧ್ಯ ಈಗ ಪ್ರೊಫೈಲ್ʼನಲ್ಲಿ ಹೆಸರನ್ನ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆನ್ಲೈನ್ʼನಲ್ಲಿ ಸ್ವಲ್ಪ ಬದಲಾವಣೆ ಮಾಡಬಹುದು.

TRENDING