Tuesday, April 13, 2021
Home ಸುದ್ದಿ ಜಾಲ ಮಂಗಳೂರು : ಎಟಿಎಂ ಸ್ಕ್ರೀಮಿಂಗ್ ಮಾಡುತ್ತಿದ್ದವರು ಅಂದರ್!

ಇದೀಗ ಬಂದ ಸುದ್ದಿ

ಮಂಗಳೂರು : ಎಟಿಎಂ ಸ್ಕ್ರೀಮಿಂಗ್ ಮಾಡುತ್ತಿದ್ದವರು ಅಂದರ್!

 ಮಂಗಳೂರು: ನಿಮ್ಮತ್ರ ಎಟಿಎಂ ಇದೆ. ನೀವು ಬ್ಯಾಂಕಿಗೂ ಹೋಗಿಲ್ಲ. ಎಟಿಎಂ ಗೂ ಹೋಗಿಲ್ಲ. ಆದರೆ, ನಿಮ್ಮ ಎಟಿಎಂ ನಿಂದ ಹಣ ಡ್ರಾ ಆಗ್ತಾನೆ ಇದೆ. ಅರೇ ಎಟಿಎಂ ಕಾರ್ಡ್​ನ ಯಾರಿಗೂ ಕೊಟ್ಟಿಲ್ಲ. ಪಿನ್ ನಂಬರ್ ಯಾರಿಗೂ ಗೊತ್ತಿಲ್ಲ. ಆದ್ರೂ ಹಣ ಅದು ಹೇಗೆ ಡ್ರಾ ಆಯ್ತು ಅನ್ಕೊಂಡ್ರಾ. ಅದು ಹೇಗೆ ಡ್ರಾ ಆಗುತ್ತೆ? ಅಂತಾ ನಾವು ಹೇಳ್ತೀವಿ ಕೇಳಿ. ಆ ಹಣ ಡ್ರಾ ಮಾಡೋ ಸ್ಕ್ರೀಮಿಂಗ್ ಗ್ಯಾಂಗ್ ಮಂಗಳೂರಿನಲ್ಲಿ ಅಂದರ್ ಆಗಿದ್ದಾರೆ. ಹೀಗೆ ಎಟಿಎಂ ಮುಂದೆ ಇಬ್ಬರನ್ನು ಸ್ಥಳೀಯರು ಮತ್ತು ಪೊಲೀಸರು ಹಿಡಿಯಲು ಯತ್ನಿಸುತ್ತಿದ್ರೆ, ಒಬ್ಬ ತಪ್ಪಿಸಿಕೊಂಡು ಇನ್ನೊಬ್ಬ ತಗ್ಲಾಕೊಳ್ತಾನೆ. ಹೀಗೆ ತಗ್ಲಾಕ್ಕೊಂಡವನ ಮಾಹಿತಿ ಮೇರೆಗೆ ಒಂದು ದೊಡ್ಡ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ. ಅದ್ಯಾರು ಅನ್ನೋದಕ್ಕಿಂತ ಇವರ ದಂಧೆ ಏನು ಅನ್ನೋದನ್ನು ಹೇಳ್ತೀವಿ ಕೇಳಿ. ಇತ್ತೀಚೆಗೆ ಮಂಗಳೂರಿನಲ್ಲಿ ಅದೆಷ್ಟೋ ಜನರು ಎಟಿಎಂ ಗೆ ಹೋಗದೆ ತಮ್ಮ ಖಾತೆಯಲ್ಲಿ ಹಣ ಕಳೆದುಕೊಂಡಿದ್ದರು. ಎಟಿಎಂಗೆ ಹೋಗದೆ ತಮ್ಮ ಖಾತೆಯಲ್ಲಿ ಹಣ ಕಳೆದುಕೊಂಡವರು ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಣ ಹೇಗೆ ಹೋಗುತ್ತಿದೆ ಅಂತಾ ಸೈಬರ್ ಪೊಲೀಸರು ತನಿಖೆ ಮಾಡಿದಾಗ ಎಟಿಎಂ ಸ್ಕಿಮ್ಮಿಂಗ್ ಪತ್ತೆಯಾಗಿತ್ತು. ಎಟಿಎಂ ಗೆ ಸ್ಪೈ ಕ್ಯಾಮೆರಾ ಮತ್ತು ಕಾರ್ಡ ರೀಡರ್ ಗಳನ್ನು ಬಳಿಸಿ ಹಣ ಲಪಟಾಯಿಸುವ ತಂತ್ರವೇ ಎಟಿಎಂ ಸ್ಕಿಮ್ಮಿಂಗ್. ಸದ್ಯ ಹೀಗೆ ಎಟಿಎಮ್ ಸ್ಕಿಮ್ಮಿಂಗ್ ಮೂಲಕ ಹಣ ಲಪಟಾಯಿಸುತ್ತಿದ್ದರನ್ನು ಸಾರ್ವಜನಿಕರ ಸಹಾಯದೊಂದಿಗೆ ಹಿಡಿದಿದ್ದಾರೆ. ಹೌದು ಮಂಗಳೂರಿನ ಮಂಗಳಾದೇವಿ ಬಳಿ ಎಸ್.ಬಿ.ಐ ಎಟಿಎಂ ಬಳಿ ಸ್ಕಿಮ್ಮಿಂಗ್ ಮಾಡುತ್ತಿದ್ದ ವೇಳೆ, ಎಟಿಎಂ ಎದುರು ಇರುವ ಪೆಟ್ರೋಲ್ ಬಂಕ್ ನ ಸಿಬ್ಬಂದಿ ಮತ್ತು ಪೊಲೀಸರು ಅವರನ್ನು ಹಿಡಿದಿದ್ದಾರೆ. ಅಲ್ಲಿ ಸಿಕ್ಕವರು ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ನಾಲ್ಕು ಜನ ಅಂತರಾಜ್ಯ ಕದೀಮರನ್ನು ಬಂಧಿಸಿದ್ದಾರೆ. ಹೌದು ಕೇರಳ ಮೂಲದ ಗ್ಲಾಡಿವಿನ್ ಜಿಂಟೋ ಜಾಯ್, ದಿನೇಶ್ ಸಿಂಗ್ ರಾವತ್, ಅಬ್ದುಲ್ ಮಜೀದ್, ರಾಹುಲ್ ಬಂಧಿತ ಆರೋಪಿಗಳು.

 ಹೀಗೆ ಎಟಿಎಂ ನಲ್ಲಿ ಕಾರ್ಡ್​ ರೀಡರ್ ಮತ್ತು ಅಕ್ಕ ಪಕ್ಕದಲ್ಲಿ ಕ್ಯಾಮೆರಾಗಳನ್ನು ಫಿಕ್ಸ್ ಮಾಡಿ ಡುಪ್ಲೀಕೇಟ್ ಕಾರ್ಡ್ ಮಾಡಿ, ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ಪಾಸ್ ವರ್ಡ್ ಬಳಸಿ ಬೇರೊಂದು ಎಟಿಎಂ ನಲ್ಲಿ ಹಣ ಡ್ರಾ ಮಾಡುತ್ತಾರೆ. ಕಳೆದ ನವೆಂಬರ್ ನಿಂದ ಮಂಗಳೂರಿನಲ್ಲಿ 60 ಕ್ಕೂ ಹೆಚ್ಚು ಕಡೆ ಹೀಗೆ ಮಾಡಿ 30 ಲಕ್ಷಕ್ಕೂ ಹೆಚ್ಚು ಹಣ ಕದ್ದಿದ್ದಾರೆ. ಇನ್ನು ದೆಹಲಿ ಸೇರಿದಂತೆ ಹಲವು ಕಡೆ ಹೀಗೆ ಮಾಡಿದ್ದಾರೆ. ಇನ್ನು ಹೀಗೆ ಮಾಡಲು ಆಗದಿದ್ದಾಗ ಜನರಿಗೆ ಹೊಡೆದು ಹಣ ಕಿತ್ತಿಕೊಂಡು ಹೋಗಿದ್ದಾರೆ. ಬಂದ ಹಣವನ್ನು ಗೋವಾಗೆ ಹೋಗಿ ಮೋಜು ಮಸ್ತಿ ಮಾಡಿ ಕಳೆಯುತ್ತಿದ್ದರು.

ಹಿಡಿಯುವಾಗ ಓರ್ವ. ಕಾಲು ಮುರಿದು ಆಸ್ಪತ್ರೆಯಲ್ಲಿದ್ದಾನೆ. ಇನ್ನು ಈ ಗ್ಯಾಂಗ್ ನ ಹಲವರು ಸಿಗುಬೇಕಿದೆ. ಇನ್ನು ನೀವು ಎಟಿಎಂ ಗೆ ಹೋದ್ರೆ ಪಾಸ್ ವರ್ಡ್ ಹಾಕುವಾಗ ಕೈ ಅಡ್ಡ ಇಟ್ಟು ಹಾಕಿದ್ರೆ ವಂಚನೆಯಿಂದ ಬಚಾವ್ ಆಗ್ತೀರಾ. ಇಷ್ಟೆಲ್ಲಾ ಆದ್ರು ಕೂಡ ಬ್ಯಾಂಕ್ ಗಳು ಈ ಬಗ್ಗೆ ಎಚ್ಚರ ವಹಿಸದೇ ಇದೋದು ಮಾತ್ರ ವಿಪರ್ಯಾಸ.

TRENDING