Sunday, February 28, 2021
Home ಜಿಲ್ಲೆ ಚಿಕ್ಕಬಳ್ಳಾಪುರ ಹಿರೇನಾಗವಲ್ಲಿ ಜಿಲೆಟಿನ್ ಸ್ಪೋಟ ಪ್ರಕರಣ: ನಾಲ್ವರು ಅರೆಸ್ಟ್

ಇದೀಗ ಬಂದ ಸುದ್ದಿ

ಹಿರೇನಾಗವಲ್ಲಿ ಜಿಲೆಟಿನ್ ಸ್ಪೋಟ ಪ್ರಕರಣ: ನಾಲ್ವರು ಅರೆಸ್ಟ್

 ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಎಂ. ರಾಘವೇಂದ್ರ ರೆಡ್ಡಿ, ಪ್ರವೀಣ್, ರಿಯಾಜ್, ಮಧುಸೂದನ ರೆಡ್ಡಿ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಆಂಧ್ರಪ್ರದೇಶದ ಗೊರಂಟ್ಲದಲ್ಲಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ರಾಘವೇಂದ್ರ ರೆಡ್ಡಿ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ಕರೆತಂದಿದ್ದಾರೆ. ಪರಾರಿಯಾಗಿರುವ ಪ್ರಮುಖ ಆರೋಪಿ ನಾಗರಾಜ್ ಗಾಗಿ ತೀವ್ರ ಶೋಧ ಕೈಗೊಳ್ಳಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಹಿರೇನಾಗವಲ್ಲಿ ಸಮೀಪ ಜಿಲೆಟಿನ್ ಸಾಗಿಸುವ ಸಂದರ್ಭದಲ್ಲಿ ಸ್ಪೋಟಿಸಿದ್ದು ಘಟನೆಯಲ್ಲಿ ರಾಮು, ಉಮಾಕಾಂತ, ಅಭಿಲಾಶ್, ಮುರಳಿ, ಮಹೇಶ, ಗಂಗಾಧರ ಮೃತಪಟ್ಟಿದ್ದರು.

TRENDING