Tuesday, April 13, 2021
Home ಸುದ್ದಿ ಜಾಲ ಪ್ರಸಿದ್ಧ ಪಂಜಾಬಿ ಗಾಯಕ ಶಾರ್ದೂಲ್ ಸಿಕಂದರ್ ನಿಧನ

ಇದೀಗ ಬಂದ ಸುದ್ದಿ

ಪ್ರಸಿದ್ಧ ಪಂಜಾಬಿ ಗಾಯಕ ಶಾರ್ದೂಲ್ ಸಿಕಂದರ್ ನಿಧನ

ಮೊಹಾಲಿ: ಪ್ರಸಿದ್ಧ ಪಂಜಾಬಿ ಗಾಯಕ ಶಾರ್ದೂಲ್ ಸಿಕಂದರ್ (60) ಪಂಜಾಬ್‌ನ ಮೊಹಾಲಿಯಲ್ಲಿ ಬುಧವಾರ ನಿಧನರಾದರು.

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದು “ಖ್ಯಾತ ಪಂಜಾಬಿ ಗಾಯಕ ಶಾರ್ದೂಲ್ ಸಿಕಂದರ್ ಅವರ ನಿಧನ ಬಹಳ ದುಃಖ ತಂದಿದೆ. ಅವರಿಗೆ ಇತ್ತೀಚೆಗೆ ಕೋವಿಡ್ ಕಾಣಿಸಿಕೊಂಡಿತ್ತು.ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪಂಜಾಬಿ ಸಂಗೀತ ಪ್ರಪಂಚ ಅವರ ಅಗಲಿಕೆಯಿಂದ ಬಡವಾಗಿದೆ.ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು…” ಎಂದು ಟ್ವೀಟ್ ಮಾಡಿದ್ದಾರೆ.

ಗಾಯಕನ ನಿಧನವು ಇಡೀ ಸಂಗೀತ ಕ್ಷೇತ್ರಕ್ಕೆ ಆಘಾತ ತಂದಿದೆ.ಸಿಕಂದರ್ ಸಾವಿನ ಬಗ್ಗೆ ಸಂಗೀತ ಕ್ಷೇತ್ರದ ಹಲವು ದಿಗ್ಗಜರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.

TRENDING