Saturday, April 17, 2021
Home ಸುದ್ದಿ ಜಾಲ ತಾಯಿಯ ಪ್ರಾಣ ಕಾಪಾಡಲು ಚಿರತೆಯೊಂದಿಗೆ ಸೆಣಸಿ ಗಾಯಗೊಂಡಿರುವ ಕಿರಣ್ ಗೆ ಚಿಕಿತ್ಸೆಗಾಗಿ 25 ಸಾವಿರ ನೀಡಿದ...

ಇದೀಗ ಬಂದ ಸುದ್ದಿ

ತಾಯಿಯ ಪ್ರಾಣ ಕಾಪಾಡಲು ಚಿರತೆಯೊಂದಿಗೆ ಸೆಣಸಿ ಗಾಯಗೊಂಡಿರುವ ಕಿರಣ್ ಗೆ ಚಿಕಿತ್ಸೆಗಾಗಿ 25 ಸಾವಿರ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿ

ಬೆಂಗಳೂರು : ಅರಸೀಕೆರೆ ತಾಲೂಕು ಬೈರಗೊಂಡನಹಳ್ಳಿ ಬಳಿ ಬೆಳಗ್ಗೆ ತಾಯಿ ಮಗನ ಮೇಲೆ‌ ದಾಳಿ ಮಾಡಿದ್ದ ‌ಚಿರತೆ ಚಂದ್ರಮ್ಮ ಮತ್ತು ಕಿರಣ್ ಎಂಬುವರನ್ನು ಗಾಯಗೊಳಿಸಿತ್ತು. ತಾಯಿಯನ್ನು ರಕ್ಷಣೆ ಮಾಡಲು ಚಿರತೆಯೊಂದಿಗೆ ಸೆಣಸಾಡಿದ್ದಂತ ಕಿರಣ್, ಗಾಯಗೊಂಡಿದ್ದರು. ಇಂತಹ ತಾಯಿಯ ಪ್ರಾಣ ಕಾಪಾಡಲು ಚಿರತೆಯೊಂದಿಗೆ ಸೆಣಸಿ ಗಾಯಗೊಂಡಿರುವ ಕಿಣರ್ ಗೆ ಚಿಕಿತ್ಸೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 25 ಸಾವಿರ ನೀಡಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ತಾಯಿ ಪ್ರಾಣ ಕಾಪಾಡಲು ಚಿರತೆಯೊಡನೆ ಸೆಣಸಿ ಕೊಂದ ಅರಸೀಕೆರೆಯ ಕಿರಣ್ ನ ಶೌರ್ಯವನ್ನು ನಾನು ಪ್ರಶಂಸಿಸುತ್ತೇನೆ. ಈ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತಾಯಿ-ಮಗನನ್ನು ಭೇಟಿಯಾಗುವಂತೆ ಹಾಸನ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇನೆ. ಅವರ ಚಿಕಿತ್ಸೆಗೆ ₹25,000 ಹಣವನ್ನೂ ತಲುಪಿಸಲಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.

TRENDING