Saturday, March 6, 2021
Home ಅಂತರ್ ರಾಷ್ಟ್ರೀಯ ಕಾರು ಅಪಘಾತ: ಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ ಸ್ಥಿತಿ ಗಂಭೀರ..!

ಇದೀಗ ಬಂದ ಸುದ್ದಿ

ಕಾರು ಅಪಘಾತ: ಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ ಸ್ಥಿತಿ ಗಂಭೀರ..!

ಕ್ಯಾಲಿಫೋರ್ನಿಯಾ: ಕಾರು ಅಪಘಾತದಲ್ಲಿ ಪ್ರಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ (45) ಗಂಭೀರವಾಗಿ ಗಾಯಗೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಘಟನೆ ನಡೆದಿರುವುದಾಗಿ ಲಾಸ್​ ಏಂಜಲಿಸ್​ನ ಕೌಂಟಿ ಶೆರಿಫ್ಸ್​ ಇಲಾಖೆ ಮಾಹಿತಿ ನೀಡಿದೆ.

ಟೈಗರ್​ ವುಡ್​ ಕಾಲಿಗೆ ಅನೇಕ ಗಾಯಗಳಾಗಿರುವುದಾಗಿ ಅವರ ಏಜೆಂಟ್​ ಮಾರ್ಕ್​ ಸ್ಟೈನ್​ಬರ್ಗ್​ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಪಘಾತದ ವೇಳೆ ಕಾರಿನಲ್ಲಿ ವುಡ್ಸ್​ ಒಬ್ಬರೆ ಇಬ್ಬರು. ಅವರ ಕಾಲಿಗೆ ಅನೇಕ ಗಾಯಗಳಾಗಿವೆ. ಸದ್ಯ ಕಾಲಿಗೆ ಸರ್ಜರಿ ಮಾಡಲಾಗಿದೆ ಎಂದು ಸ್ಟೈನ್​ಬರ್ಗ್​ ತಿಳಿಸಿದ್ದಾರೆ.

ವುಡ್ಸ್​ ಅವರ ಕಾರು ಸಂಪೂರ್ಣ ಹಾನಿಯಾಗಿದೆ ಎಂದು ಲಾಸ್​ ಏಂಜಲಿಸ್​ ಕೌಂಟಿ ಶೆರಿಫ್​ ಇಲಾಖೆ ತಿಳಿಸಿದೆ. ಮುಂದುವರಿದು 2021ರ ಫೆಬ್ರವರಿ 23ರ ಬೆಳಗ್ಗೆ 7.12ರ ಸುಮಾರಿಗೆ ವುಡ್ಸ್​ ಕಾರು ಅಪಘಾತಕ್ಕೀಡಾಯಿತು. ಕಾರು ಬ್ಲ್ಯಾಕ್‌ಹಾರ್ಸ್ ರಸ್ತೆಯಲ್ಲಿರುವ ಹಾಥಾರ್ನ್ ಬೌಲೆವಾರ್ಡ್‌ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.

ಲಾಸ್ ಏಂಜಲೀಸ್ ಕೌಂಟಿಯ ಅಗ್ನಿಶಾಮಕ ದಳ ಮತ್ತು ಅರೆವೈದ್ಯರು ವುಡ್ಸ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು. ಆ ಬಳಿಕ ಗಾಯಾಳು ವುಡ್ಸ್​ರನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕೌಂಟಿ ಶೆರಿಫ್​ ಇಲಾಖೆ ಹೇಳಿದೆ.

ವುಡ್ಸ್ ಅವರು ಕಾರು ಅಪಘಾತದಲ್ಲಿ ಸಿಲುಕಿರುವುದು ಇದು ಮೂರನೇ ಬಾರಿ. 2009ರಲ್ಲಿ ಇದಕ್ಕಿಂತಲೂ ಭೀಕರವಾಗಿ ಅಪಘಾತ ನಡೆದಿತ್ತು. ಅಂದು ಎಸ್​ಯುವಿ ಕಾರು ಮರಕ್ಕೆ ಅಪ್ಪಳಿಸಿತ್ತು. ಇದರ ಬೆನ್ನಲ್ಲೇ ವುಡ್ಸ್​ ಅನೇಕ ಮಹಿಳೆಯರೊಂದಿಗೆ ಸಂಬಂಧವಿದೆ ಮತ್ತು ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದಾನೆ ಎಂಬ ಆಘಾತಕಾರಿ ವಿಷಯು ಬಹಿರಂಗವಾಗಿತ್ತು.

TRENDING