Monday, March 8, 2021
Home ಅಂತರ್ ರಾಷ್ಟ್ರೀಯ ಆತ್ಮಹತ್ಯೆ ಪ್ರಮಾಣ ತಡೆಗೆ ಮಹತ್ವದ ನಿರ್ಧಾರ: ಹೊಸ ಸಚಿವರ ನೇಮಕ

ಇದೀಗ ಬಂದ ಸುದ್ದಿ

ಆತ್ಮಹತ್ಯೆ ಪ್ರಮಾಣ ತಡೆಗೆ ಮಹತ್ವದ ನಿರ್ಧಾರ: ಹೊಸ ಸಚಿವರ ನೇಮಕ

ಟೋಕಿಯೋ: ಜಪಾನ್ ಪ್ರಧಾನಿ ಕ್ಯಾಬಿನೆಟ್ ಗೆ ಹೊಸ ಸಚಿವರನ್ನು ನೇಮಕ ಮಾಡಿದ್ದಾರೆ. ಕಳೆದ 11 ವರ್ಷಗಳಲ್ಲಿಯೇ ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರ ಒಂಟಿತನ ನಿವಾರಿಸಿ ಆತ್ಮಹತ್ಯೆ ತಡೆಯಲು ಸಚಿವರನ್ನು ನೇಮಕ ಮಾಡಿದೆ.

ಪ್ರಧಾನಮಂತ್ರಿ ಯೋಶಿಹೈಡ್ ಸುಗಾ ಅವರು ಒಂಟಿತನ ನಿವಾರಿಸಿ, ಆತ್ಮಹತ್ಯೆ ತಡೆಯಲು ಹೊಸ ಖಾತೆಯೊಂದಿಗೆ ಸಚಿವರನ್ನು ನೇಮಕ ಮಾಡಿದ್ದಾರೆ. 2018 ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಇಂತಹ ಸಚಿವರನ್ನು ನಿಯೋಜಿಸಲಾಗಿತ್ತು. ಜಪಾನ್ ನಲ್ಲಿ ಹೆಚ್ಚುತ್ತಿರುವ ಮಹಿಳೆಯರ ಆತ್ಮಹತ್ಯೆ ಪ್ರಕರಣ ಸೇರಿದಂತೆ ಆತ್ಮಹತ್ಯೆ ಪ್ರಮಾಣ ತಡೆಯುವ ಉದ್ದೇಶದಿಂದ ಸಮಸ್ಯೆ ನಿವಾರಿಸಲು ಮತ್ತು ಕಾರ್ಯತಂತ್ರ ರೂಪಿಸಿ ಯೋಜನೆ ಜಾರಿಗೊಳಿಸುವ, ಸಾಮಾಜಿಕ ಒಂಟಿತನ ಮತ್ತು ಪ್ರತ್ಯೇಕತೆ ತಡೆಗಟ್ಟಲು ಜನರ ನಡುವಿನ ಸಂಬಂಧವನ್ನು ರಕ್ಷಿಸಲು ಚಟುವಟಿಕೆ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ

TRENDING