ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಈಗ ನಿಮ್ಮ ಅಕೌಂಟ್ ನಲ್ಲಿ ನೋಂದಾವಣೆಯನ್ನು ಸುಲಭಗೊಳಿಸಲು ಮುಂದಾಗಿದ್ದು, ಈ ಮೂಲಕ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಪ್ರಯತ್ನವನ್ನು ಹಾಗೂ ಸಮಯವನ್ನು ಉಳಿಸಿದೆ.
ಎಸ್ ಬಿಐ ಉಳಿತಾಯ ಖಾತೆಹೊಂದಿರುವ ಎಸ್ ಬಿಐ ಗ್ರಾಹಕರಿಗೆ ಚಾಲ್ತಿ ಖಾತೆ, ನಿಶ್ಚಿತ ಠೇವಣಿ ಅಥವಾ ಆವರ್ತಠೇವಣಿ (ಆರ್ ಡಿ) ಹೊಂದಿರುವ ವರಿಗೆ ಆನ್ ಲೈನ್ ಮೂಲಕ ನಾಮನಿರ್ದೇಶಿತ ರನ್ನು ನೋಂದಾಯಿಸಬಹುದಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಬಿಐ, ‘ಈಗ ಎಸ್ ಬಿಐ ಗ್ರಾಹಕರು ನಮ್ಮ ಶಾಖೆಗೆ ಭೇಟಿ ನೀಡಿ ಅಥವಾ https://onlinesbi.com ಲಾಗಿನ್ ಆಗುವ ಮೂಲಕ ತಮ್ಮ ನಾಮನಿರ್ದೇಶಿತ ನೋಂದಣಿ ಮಾಡಿಕೊಳ್ಳಬಹುದು’ ಎಂದು ಹೇಳಿದೆ. ನೀವು SBI ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ಅಥವಾ YONO ಮೊಬೈಲ್ ಆಪ್ ಮೂಲಕ ಈ ನಾಮಿನಿಯನ್ನು ಮಾಡಬಹುದಾಗಿದೆ.