Monday, March 8, 2021
Home ಜಿಲ್ಲೆ ವಿಜಯಪುರ ವಿಜಯಪುರ : ಕೃಷಿ ವಿಜ್ಞಾನ ಕೇಂದ್ರ ಆಡಳಿತ ಭವನದ ಉದ್ಘಾಟನೆ

ಇದೀಗ ಬಂದ ಸುದ್ದಿ

ವಿಜಯಪುರ : ಕೃಷಿ ವಿಜ್ಞಾನ ಕೇಂದ್ರ ಆಡಳಿತ ಭವನದ ಉದ್ಘಾಟನೆ

ವಿಜಯಪುರ: ಸರ್ಕಾರ ರಾಜ್ಯದ ರೈತರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಅವರು ಹೇಳಿದರು.

ಜಿಲ್ಲೆಯ ಇಂಡಿ ಹೊರವಲಯದಲ್ಲಿ 601 ಸ್ಕ್ವೇರ್ ಮೀ. ವಿಸ್ತೀರ್ಣದಲ್ಲಿ, 1 ಕೋಟಿ 58 ಲಕ್ಷ ರೂ. ವೆಚ್ಚದ ಕೃಷಿ ವಿಜ್ಞಾನ ಕೇಂದ್ರ  ಆಡಳಿತ ಭವನದ ಉದ್ಘಾಟನಾ ಸಮಾರಂಭ ಮತ್ತು  ಜಿಲ್ಲಾ ಪಂಚಾಯತ ವಿಜಯಪುರ, ಕೃಷಿ ಇಲಾಖೆ ಇಂಡಿ, ರೈತ ಸಂಪರ್ಕ ಕೇಂದ್ರ ಬಳ್ಳೊಳ್ಳಿ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ  ಉದ್ಘಾಟಿಸಿದ ಮಾತನಾಡಿದ ಅವರು ಕೃಷಿ ವಿಜ್ಞಾನ ಕೇಂದ್ರವು ರೈತರ ಆಸ್ಪತ್ರೆಯಂತಾಗಿದೆ ಎಂದು ಹೇಳಿದರು.

ಅದರಂತೆ ಸರಕಾರ ರೈತ ಸಮಸ್ಯೆ ಆಲಿಸಲು ರೈತರೊಂದಿಗೆ ಒಂದು ದಿನದಂತಹ ಯೋಜನೆ ಹಾಕಿಕೊಂಡಿದೆ. ಇದು ರೈತರ ಕಾರ್ಯಕ್ರಮ, ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ರೂಪಿಸಲಾಗಿರುವ ಕಾರ್ಯಕ್ರಮ, ಸರ್ಕಾರವನ್ನು ರೈತರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಸವನಾಡು ವಿಜಯಪುರ ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ.

ಗಡಿ ಭಾಗದ ರೈತರು ವೈಜ್ಞಾನಿಕ, ಸಮಗ್ರ, ಸಾವಯವ ಕೃಷಿ ನೀತಿ ಅಳವಡಿಸಿಕೊಳ್ಳಿ. ಸಾಂಪ್ರದಾಯಿಕ ಕೃಷಿ ಮಾಡಿ, ರಾಸಾಯನಿಕ ಗೊಬ್ಬರ ಬಳಕೆ ತ್ಯಜಿಸಿ, ಭೂಮಿಯ ಫಲವತ್ತತೆ ಕಾಪಾಡಿ, ಸಾವಯವ ಕೃಷಿ ಕೈಗೊಳ್ಳುವ ರೈತರಿಗೆ 1 ಹೆಕ್ಟರ್‍ಗೆ  ಎಂದು ತಿಳಿಸಿದ ಅವರು ಪ್ರತಿ ಗ್ರಾಮದಲ್ಲಿ ಒಂದು ಮಣ್ಣು ಪರೀಕ್ಷೆ ಕೇಂದ್ರ ಮಾಡುವ ಕನಸು ಪ್ರಧಾನಿಗಳದ್ದಾಗಿದೆ. ಅದರಂತೆ ಸ್ವಾಭಿಮಾನಿ ರೈತ ಎಂಬ ಕಾರ್ಡ ಸರ್ಕಾರ ಜಾರಿಗೆ ತಂದಿದ್ದು, ನಾನು ಭಾರತದ ದೇಶದ ಹೆಮ್ಮೆಯ ರೈತ ಎಂದು ಹೆಮ್ಮೆಯಿಂದ ಹೇಳಲು ನಮ್ಮ ರೈತರಿಗೆ ಇದು ಸಹಾಯವಾಗುತ್ತದೆ.

ರೈತರು ಹೊಸ ಹೊಸ ಸಮಗ್ರ ಕೃಷಿ ಪದ್ದತಿ ಯನ್ನು ಅಳವಡಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು. ಪತ್ರಿ ಜಿಲ್ಲೆ ಮತ್ತು ಪ್ರತಿ ತಾಲ್ಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸುವ ಗುರಿ ಸರ್ಕಾರ ಹೊಂದಿದ್ದು, ಅದರಂತೆ ಅಧಿಕಾರಿಗಳು ಕೂಡ ರೈತ ಸ್ನೇಹಿಯಾಗಿರಬೇಕು, ಅಧಿಕಾರಿಗಳು ರೈತರ ಹಿತ ಕಾಪಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇಂಡಿ ಶಾಸಕರ ಯಶವಂತರಾಯಗೌಡ  ಪಾಟೀಲ, ಕರ್ನಾಟಕ ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ  ಶಂಕರಗೌಡ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾ ಪಂಚಾಯತ ಅಧ್ಯಕ್ಷ ಸುಜಾತ ಕಳ್ಳಿಮನಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಮಾತನಾಡಿದರು.

 ಕಾರ್ಯಕ್ರಮದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ, ತಾ ಪಂ ಅಧ್ಯಕ್ಷ ಅಣ್ಣಾರಾಯ ಬಿದರಕೊಟೆ, ಪುರಸಭೆಯ ಅಧ್ಯಕ್ಷ   ಶೈಲಜಾ  ಪೂಜಾರಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ  ಕುಲಪತಿ ಮಾಹಾದೇವ ಛಟ್ಟಿ, ಡಾ. ಎ. ಬಿ ಪಾಟೀಲ, ಸುರೇಶ ಗೊಣಸಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿನಾಯಕ ತಂಗಾ

ವಿ ನ್ಯೂಸ್ 24 ಕನ್ನಡ

ಇಂಡಿ

TRENDING