Saturday, February 27, 2021
Home ಸುದ್ದಿ ಜಾಲ ಮುಂಬೈ ಪೊಲೀಸರ ವಶಕ್ಕೆ ಭೂಗತ ಪಾತಕಿ ರವಿ ಪೂಜಾರಿ

ಇದೀಗ ಬಂದ ಸುದ್ದಿ

ಮುಂಬೈ ಪೊಲೀಸರ ವಶಕ್ಕೆ ಭೂಗತ ಪಾತಕಿ ರವಿ ಪೂಜಾರಿ

ಮುಂಬೈನಲ್ಲಿ 80ಕ್ಕೂ ಹೆಚ್ಚು ಕೇಸ್​ಗಳ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ರವಿ ಪೂಜಾರಿಯನ್ನ ಇಂದು ಬೆಳಗ್ಗೆ ಮುಂಬೈಗೆ ಕರೆತರಲಾಗಿದೆ. ಕಳೆದ ವಾರ ಬೆಂಗಳೂರು ಕೋರ್ಟ್​ನಲ್ಲಿ ಸುದೀರ್ಘ ಒಂದು ವರ್ಷದ ವಾದ – ವಿವಾದದ ಬಳಿಕ ಮುಂಬೈ ಪೊಲೀಸರಿಗೆ ಪೂಜಾರಿ ಕಸ್ಟಡಿ ನೀಡಲಾಗಿದೆ.

ರಾಜು ಪೂಜಾರಿ ಕಸ್ಟಡಿಗಾಗಿ ನಾವು 1 ವರ್ಷಗಳಿಂದ ಕಾಯುತ್ತಲೇ ಇದ್ದೇವೆ. ಕೊನೆಗೂ ನಮ್ಮ ಕಾಯುವಿಕೆ ಅಂತ್ಯವಾಗಿದೆ ಎಂದು ಮಹಾರಾಷ್ಟ್ರ ಅಪರಾಧ ವಿಭಾಗದ ಜಂಟಿ ಕಮಿಷನರ್​ ಮಿಲಿಂದ್​ ಭಾರಂಬೆ ಮಾಹಿತಿ ನೀಡಿದ್ದಾರೆ.
ರವಿ ಪೂಜಾರಿ ಮಾರ್ಚ್​ 9ನೇ ತಾರೀಖಿನವರೆಗೂ ಮುಂಬೈ ಪೊಲೀಸರ ಕಸ್ಟಡಿಯಲ್ಲೇ ಇರಲಿದ್ದಾನೆ .

ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದ 59 ವರ್ಷದ ಭೂಗತಪಾತಕಿ ರವಿ ಪೂಜಾರಿಯನ್ನ 2020ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪೊಲೀಸರು ಸೆನೆಗಲ್​ನಲ್ಲಿ ಬಂದಿಸಿ ಬೆಂಗಳೂರಿಗೆ ಕರೆ ತಂದಿದ್ದರು.

TRENDING