Monday, March 8, 2021
Home ಸುದ್ದಿ ಜಾಲ ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ಮತ್ತೆ ಹೆಚ್ಚಳ

ಇದೀಗ ಬಂದ ಸುದ್ದಿ

ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ಮತ್ತೆ ಹೆಚ್ಚಳ

ನವದೆಹಲಿ: ಮಂಗಳವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಈ ಮೂಲಕ ಮತ್ತೆ ಜನಸಾಮಾನ್ಯರನ್ನು ಆತಂಕಕ್ಕೆ ಈಡು ಮಾಡುವಂತಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 25 ಪೈಸೆ ಹೆಚ್ಚಳವಾಗಿದ್ದರೆ, ಡೀಸೆಲ್ ದರ 35 ಪೈಸೆ ಏರಿಕೆಯಾಗಿದೆ.

ಅಂದ ಹಾಗೇ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಮತ್ತು ಸರಕು ಸಾಗಣೆ ಶುಲ್ಕಗಳ ಮೇಲೆ ಅವಲಂಬಿತವಾಗಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಏರಿಕೆ ಯಿಂದ ಪೆಟ್ರೋಲ್ ದರ ದೆಹಲಿಯಲ್ಲಿ ಪ್ರತಿ ಲೀಟರ್ ಗೆ 90.83 ರೂ. ಡೀಸೆಲ್ ದರ ಲೀಟರ್ ಗೆ ₹81.32ಕ್ಕೆ ಮಾರಾಟವಾಗುತ್ತಿದೆ.

TRENDING