Saturday, February 27, 2021
Home ಸುದ್ದಿ ಜಾಲ ಉತ್ತರ ಪ್ರದೇಶ : ತಂದೂರಿ ರೋಟಿ ಮೇಲೆ ಉಗುಳುತ್ತಿದ್ದ ಬಾಣಸಿಗನ ಬಂಧನ

ಇದೀಗ ಬಂದ ಸುದ್ದಿ

ಉತ್ತರ ಪ್ರದೇಶ : ತಂದೂರಿ ರೋಟಿ ಮೇಲೆ ಉಗುಳುತ್ತಿದ್ದ ಬಾಣಸಿಗನ ಬಂಧನ

ಕೋವಿಡ್ ಸಾಂಕ್ರಮಿಕ ಈ ಕಾಲಘಟ್ಟದಲ್ಲಿ ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಕಾಳಜಿ ಎಲ್ಲೆಡೆ ಮೂಡಿ ಬರುತ್ತಿದೆ. ಇದೇ ವೇಳೆ, ಮದುವೆ ಸಮಾರಂಭವೊಂದರ ಭೋಜನ ಕೂಟಕ್ಕೆ ರೋಟಿಗಳನ್ನು ತಯಾರಿಸುತ್ತಿದ್ದ ವೇಳೆ ಅವುಗಳ ಮೇಲೆ ಉದ್ದೇಶಪೂರ್ವಕವಾಗಿ ಉಗುಳುತ್ತಿದ್ದ ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಮದುವೆ ಸಮಾರಂಭವೊಂದರ ವೇಳೆ, ರೋಟಿ ಹಿಟ್ಟನ್ನು ಲಟ್ಟಿಸಿ ತಂದೂರಿ ಒಲೆಗೆ ಹಾಕುವ ಮುನ್ನ ಅವುಗಳ ಮೇಲೆ ಉಗುಳುತ್ತಿರುವ ಕಿಡಿಗೇಡಿ ಬಾಣಸಿಗನ ವಿಡಿಯೋ ವೈರಲ್‌ ಆಗಿದೆ.

ಬಾಣಸಿಗನ ನೌಶದ್ ಅಲಿಯಾಸ್ ಸೊಹೇಲ್‌ ವಿರುದ್ಧ ಕ್ರಮ ತೆಗೆದುಕೊಳ್ಳಲು ಜನತೆ ಆಗ್ರಹಿಸಿದ ಬಳಿಕ ‌ಆತನನ್ನು ಬಂಧಿಸಲಾಗಿದೆ. ಈತನ ಈ ಕುಕೃತ್ಯದ ವಿಡಿಯೋ ಕಂಡು ಸಿಟ್ಟಿಗೆದ್ದ ನೆಟ್ಟಿಗರು ವಿಡಿಯೋ ಜೊತೆಗೆ ಮೀರತ್‌ ಪೊಲೀಸ್‌ ಅನ್ನು ಟ್ಯಾಗ್ ಮಾಡಿ, ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಲು ಪ್ರತಾಪ್‌ಪುರ್‌ ಠಾಣೆಗೆ ಜವಾಬ್ದಾರಿ ನೀಡಲಾಗಿದೆ.

TRENDING