Monday, March 8, 2021
Home ಸುದ್ದಿ ಜಾಲ ವಿಧಾನ ಪರಿಷತ್ ಕಲಾಪಕ್ಕೆ ಮಾಧ್ಯಮ ನಿರ್ಬಂಧ ಇಲ್ಲ: ಸಭಾಪತಿ

ಇದೀಗ ಬಂದ ಸುದ್ದಿ

ವಿಧಾನ ಪರಿಷತ್ ಕಲಾಪಕ್ಕೆ ಮಾಧ್ಯಮ ನಿರ್ಬಂಧ ಇಲ್ಲ: ಸಭಾಪತಿ

ಬೆಂಗಳೂರು: ಮಾರ್ಚ್ ನಾಲ್ಕರಿಂದ ಆರಂಭವಾಗುವ ಆಯವ್ಯಯ ಅಧಿವೇಶನದ ಸಮಯದಲ್ಲಿ ನಡೆಯುವ ವಿಧಾನ ಪರಿಷತ್ ಕಲಾಪದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್‍ನ ಸಭಾಪತಿಯಾದ ನಂತರ ಇಂದು ತಮ್ಮ ಕೊಠಡಿಯಲ್ಲಿ ಮೊದಲ ಬಾರಿ ಮಾಧ್ಯಮ ಗೋಷ್ಠಿಯಲ್ಲಿ ಮಾತಾನಾಡಿದ ಅವರು, ನಾವುಗಳು ಜನಪ್ರತಿನಿಧಿಗಳಾಗಿದ್ದು, ಸದನದಲ್ಲಿ ನಡೆಯುವ ಕಲಾಪವನ್ನು ನೇರವಾಗಿ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಈ ಸಂಬಂಧ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.

ಸದನದ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಮೂಡುವಂತೆ ನಾವೆಲ್ಲ ಶಾಸನ ರಚನೆ ಹಾಗೂ ವಿದ್ಯಾಮಾನಗಳ ಕುರಿತು ಚರ್ಚೆಯಲ್ಲಿ ಭಾಗವಹಿಸುವುದು ಮುಖ್ಯ. ಅಂತೆಯೇ ಮಾಧ್ಯಮಗಳು ಸಹ ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಮಾರ್ಚ್ ನಾಲ್ಕರಿಂದ ಆರಂಭವಾಗುವ ಆಯವ್ಯಯ ಅಧಿವೇಶನ ಆ ತಿಂಗಳ ಕೊನೆಯವರೆಗೆ ನಡೆಯಲಿದೆ. ಈ ಸಮಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸಂಬಂಧಿಸಿದಂತೆ ನೂತನ ಮಾಧ್ಯಮ ನಿಯಮಗಳನ್ನು ಜಾರಿಗೆ ತರಲು ಯೋಜಿಸಲಾಗಿದೆ. ಮಾರ್ಚ್ 2 ರಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸದನದಲ್ಲಿ ಮೊಬೈಲ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲು ಚಿಂತಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಮಾಧ್ಯಮವನ್ನು ನಿರ್ಬಂಧಿಸುವುದಿಲ್ಲ. ಆದರೇ, ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಉಪಸ್ಥಿತರಿದ್ದರು.

TRENDING