Sunday, February 28, 2021
Home ರಾಜಕೀಯ ಬಿಜೆಪಿ ರಾಜ್ಯ ʼಉಪಾಧ್ಯಕ್ಷ ಸ್ಥಾನʼಕ್ಕೆ ಅರವಿಂದ ಲಿಂಬಾವಳಿ ರಾಜೀನಾಮೆ..!

ಇದೀಗ ಬಂದ ಸುದ್ದಿ

ಬಿಜೆಪಿ ರಾಜ್ಯ ʼಉಪಾಧ್ಯಕ್ಷ ಸ್ಥಾನʼಕ್ಕೆ ಅರವಿಂದ ಲಿಂಬಾವಳಿ ರಾಜೀನಾಮೆ..!

 ಬೆಂಗಳೂರು: ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹುದ್ದೆಗೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ‘ಪಕ್ಷದಲ್ಲಿ ಒಬ್ಬ ವ್ಯಕ್ತಿ, ಒಂದು ಹುದ್ದೆ ಎನ್ನುವ ಸಿದ್ಧಾಂತವಿದ್ದು, ಇದರನ್ವಯ ನಾನು ಸಚಿವ ಸ್ಥಾನ ಅಲಂಕರಿಸಿರುವುದರಿಂದ, ಪಕ್ಷದ ರಾಜ್ಯ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಪಕ್ಷದ ರಾಜ್ಯ ಉಪಾದ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ ಅಧಿಯಲ್ಲಿ ತಮಗೆ ಸಲಹೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದ’ ಎಂದಿದ್ದಾರೆ.

TRENDING