Monday, March 8, 2021
Home ಸುದ್ದಿ ಜಾಲ ಮಧ್ಯಪ್ರದೇಶದಲ್ಲಿ ಕಾರು-ಟ್ಯಾಂಕರ್ ಡಿಕ್ಕಿ : 6 ಮಂದಿ ಸಾವು

ಇದೀಗ ಬಂದ ಸುದ್ದಿ

ಮಧ್ಯಪ್ರದೇಶದಲ್ಲಿ ಕಾರು-ಟ್ಯಾಂಕರ್ ಡಿಕ್ಕಿ : 6 ಮಂದಿ ಸಾವು

 ಇಂದೋರ್, ಫೆ.23 (ಪಿಟಿಐ)- ಜಿಲ್ಲೆಯ ತಲವಾಲಿ ಚಾಂದಾ ಪ್ರದೇಶದ ಪೆಟ್ರೋಲ್ ಪಂಪ್ ಬಳಿ ಮಧ್ಯರಾತ್ರಿ 2 ಗಂಟೆಗೆ ರಸ್ತೆ ಬದಿ ನಿಂತಿದ್ದ ಇಂಧನ ಟ್ಯಾಂಕರ್‍ಗೆ ರಭಸವಾಗಿ ಬಂದ ಕಾರು ಡಿಕ್ಕಿ ಹೊಡೆದು ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳದಲ್ಲೇ ಕಾರಿನ ಚಾಲಕ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ ಎಂದು ಲಾಸುಡಿಯಾ ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರು ಇಂದೋರ್ ವಾಸಿಗಳಾಗಿದ್ದು, ಎಲ್ಲರೂ 18 ರಿಂದ 28 ವರ್ಷದವರೆಂದು ತಿಳಿದುಬಂದಿದೆ. ಇಂದೋರ್ ಹೊರವಲಯದ ಮಂಗ್ಲಿಯ ಪ್ರದೇಶದಿಂದ ಹಿಂತಿರುಗುತ್ತಿದ್ದರು. ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳಿಸಲಾಗಿದೆ. ಮೃತಪಟ್ಟವರನ್ನು ರಿಷಿ ಪವಾರ್, ಸೂರಜ್, ಚಂದ್ರಭಾನ್ ರಘುವಂಶಿ, ಸೋನು ಜಾಟ್, ಸುಮಿತ್ ಸಿಂಗ್ ಹಾಗೂ ದೇವ್ ಎಂದು ಗುರುತಿಸಲಾಗಿದೆ.

TRENDING