Sunday, February 28, 2021
Home ಸುದ್ದಿ ಜಾಲ ಮರಳು ಲಾರಿ –ಆಟೋ ಡಿಕ್ಕಿ : ಐದು ಮಂದಿ ಸಾವು

ಇದೀಗ ಬಂದ ಸುದ್ದಿ

ಮರಳು ಲಾರಿ –ಆಟೋ ಡಿಕ್ಕಿ : ಐದು ಮಂದಿ ಸಾವು

ಕತಿಹಾರ್: ಬಿಹಾರದ ಕತಿಹಾರ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಟೋ ರಿಕ್ಷಾಕ್ಕೆ ಮರಳು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕತಿಹಾರ್ ಜಿಲ್ಲೆಯ ಕುರ್ಷೆಲಾ ಬಳಿ ರಾಷ್ಟ್ರೀಯ ಹೆದ್ದಾರಿ 31ರ ಸಮೇಲಿ ಪ್ರೈಮರಿ ಹೆಲ್ತ್ ಸೆಂಟರ್ ಬಳಿ ಅಪಘಾತ ಸಂಭವಿಸಿದೆ.

ಆಟೋರಿಕ್ಷಾದಲ್ಲಿ ಹತ್ತು ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲಾ ವಾದ್ಯಗೋಷ್ಠಿ ಕಲಾವಿದರಾಗಿದ್ದು ಮದುವೆ ಸಮಾರಂಭ ಮುಗಿಸಿ ತೆರಳುತ್ತಿದ್ದ ವೇಳೆಯಲ್ಲಿ ಅತಿ ವೇಗವಾಗಿ ಬಂದ ಮರಳು ಲಾರಿ ಡಿಕ್ಕಿಯಾಗಿದೆ. ಕತಿಹಾರ್ ಸಾದಾರ್ ಪೊಲೀಸ್ ಅಧಿಕಾರಿ ಅಮರ್ ಕಾಂತ್ ಝಾ ಘಟನೆ ಬಗ್ಗೆ ಮಾಹಿತಿ ನೀಡಿ, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

TRENDING