Sunday, February 28, 2021
Home ಸುದ್ದಿ ಜಾಲ 14 ವರ್ಷದ ಬಾಲಕಿಯ ಜೊತೆ ಮದುವೆಯಾದ 50 ವರ್ಷದ ಸಂಸದ

ಇದೀಗ ಬಂದ ಸುದ್ದಿ

14 ವರ್ಷದ ಬಾಲಕಿಯ ಜೊತೆ ಮದುವೆಯಾದ 50 ವರ್ಷದ ಸಂಸದ

ಜಮೀಯತ್ ಉಲೇಮಾ-ಎ-ಇಸ್ಲಾಂ (JUI-F) ನಾಯಕ ಮತ್ತು ರಾಷ್ಟ್ರೀಯ ಅಸೆಂಬ್ಲಿ (MNA) ಸದಸ್ಯ ‌ಪಾಕಿಸ್ತಾನದ ಮೌಲಾನಾ ಸಲಾಹುದ್ದೀನ್ ಅಯುಬಿ, ಬಲೂಚಿಸ್ತಾನದ 14 ವರ್ಷದ ಬಾಲಕಿಯನ್ನ ಮದುವೆಯಾಗಿದ್ದಾರೆ. ಈ ಬಗ್ಗೆ ಚಿತ್ರಾಲ್ʼನಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್ ಜಿಒ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಪಾಕ್ ಅಬ್ಸರ್ವರ್ ತಿಳಿಸಿದ್ದಾರೆ.

ಗಮನಾರ್ಹವೆಂದರೆ, ಹುಡುಗಿ ಜುಗೂರ್ʼನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, 2006ರ ಅಕ್ಟೋಬರ್ 28 ಎಂದು ಜನ್ಮ ದಿನಾಂಕವನ್ನ ದಾಖಲಿಸಲಾಗಿದೆ. ಇದ್ರಿಂದ ಬಾಲಕಿಯ ವಯಸ್ಸು ಬಹಿರಂಗವಾಗಿದೆ. ಇನ್ನು ಮೌಲಾನಾ ಸಲಾಹುದ್ದೀನ್ ಅಯೂಬಿ ಅವರಿಗೆ 50 ವರ್ಷ ವಯಸ್ಸಾಗಿದೆ.

ಸಂಘಟನೆಯ ದೂರಿನ ಮೇರೆಗೆ ಕೆಲ ದಿನಗಳ ಹಿಂದೆ ಪೊಲೀಸರು ಬಾಲಕಿಯ ಮನೆಗೆ ಬಂದಿದ್ದರು ಎಂದು ಚಿತ್ರಾಲ್ ಪೊಲೀಸ್ ಠಾಣೆ ಎಸ್ ಎಚ್ ಇ ಇನ್ಸ್ ಪೆಕ್ಟರ್ ಸಜ್ಜದ್ ಅಹ್ಮದ್ ತಿಳಿಸಿದ್ದಾರೆ.

ಪಾಕಿಸ್ತಾನದ ಸಂಸದನೊಂದಿಗೆ ಹದಿಹರೆಯದ ಹುಡುಗಿಯ ವಿವಾಹವು ದೇಶದ ಕಾನೂನಿನ ಹೊರತಾಗಿಯೂ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಮದುವೆಗಳಿಗೆ ಅನುಮತಿ ನೀಡುವುದಿಲ್ಲ ಮತ್ತು ಅವರು ಉದ್ದೇಶ ಪೂರ್ವಕವಾಗಿ ಮಾಡಿದರೆ ಪೋಷಕರಿಗೆ ಶಿಕ್ಷೆ ವಿಧಿಸುವಂತೆ ಶಿಫಾರಸ್ಸು ಮಾಡುತ್ತದೆ.

ಇನ್ನು ಬಾಲಕಿಯ ತಂದೆ 16 ವರ್ಷ ವಯಸ್ಸಿನವರೆಗೆ ಮಗಳನ್ನ ಕಳುಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ ಎಂದು ಲೋವರ್ ಚಿತ್ರಾಲ್ ಡಿಪಿಒ ಹೇಳಿದ್ದಾರೆ.

TRENDING