ನವದೆಹಲಿ: ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನ ದೆಹಲಿ ನ್ಯಾಯಾಲಯ ಸೋಮವಾರ ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ದಿಶಾ ರವಿಯನ್ನ ಐದು ದಿನಗಳ ಕಾಲ ವಶಕ್ಕೆ ಪಡೆಯಲು ಪೊಲೀಸರು ಮನವಿ ಮಾಡಿದ್ದರು. ಮೂರು ದಿನಗಳ ನ್ಯಾಯಾಂಗ ಬಂಧನ ಮುಗಿದ ನಂತರ ರವಿಯನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. 22 ವರ್ಷದ ಯುವತಿಯನ್ನು ಫೆಬ್ರವರಿ 13ರಂದು ಬಂಧಿಸಿ, ಆರಂಭದಲ್ಲಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.