Monday, March 8, 2021
Home ದಕ್ಷಿಣ ಕನ್ನಡ ಮಂಗಳೂರು ಪ್ರಧಾನಿ ಮೋದಿ ಒಬ್ಬ 'ಗೋಮುಖ ವ್ಯಾಘ್ರ' : ಸಿದ್ದರಾಮಯ್ಯ ವಾಗ್ಧಾಳಿ

ಇದೀಗ ಬಂದ ಸುದ್ದಿ

ಪ್ರಧಾನಿ ಮೋದಿ ಒಬ್ಬ ‘ಗೋಮುಖ ವ್ಯಾಘ್ರ’ : ಸಿದ್ದರಾಮಯ್ಯ ವಾಗ್ಧಾಳಿ

ಮಂಗಳೂರು : ಪ್ರಧಾನಿ ಮೋದಿ ಒಬ್ಬ ಗೋ ಮುಖ ವ್ಯಾಘ್ರ ಎಂದು ಮಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.

ಭಾವೈಕ್ಯ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಆರ್ ಎಸ್ ಎಸ್ ಹೇಳಿದಂತೆ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ, ಹಾಗೆ ಮಾಡಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ, ಆರ್ ಎಸ್ ಎಸ್ ಎನ್ನುವುದು ಒಂದು ಜಾತಿಯ ಸಂಘಟನೆ, ಅವರು ದೇಶಭಕ್ತರಾಗಿದ್ರೆ ಸ್ವಾತಂತ್ರ ಹೋರಾಟದಲ್ಲಿ ಅವರ ಕೊಡುಗೆ ಏನಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅನಂತ್ ಕುಮಾರ್ ಹೆಗಡೆ ಗ್ರಾಮ ಪಂಚಾಯತ್ ಸದಸ್ಯನಾಗುವುದ್ಕೂ ನಾಲಾಯಕ್, ಅವನು ಸಂವಿಧಾನವನ್ನೇ ಬದಲಿಸಲು ಹೊರಟಿದ್ದಾನೆ, ನರೇಂದ್ರ ಮೋದಿ ಒಬ್ಬ ಗೋಮುಖ ವ್ಯಾಘ್ರ ಎಂದು ಕಿಡಿಕಾರಿದ್ದಾರೆ. ಗೋಹತ್ಯೆ ನಿಷೇಧ ಕಾನೂನು ತಂದಿರುವುದು ಸರಿಯಲ್ಲ, ಬೀಫ್ ತಿನ್ನುವುದನ್ನು ಬೇಡ ಎನ್ನುವುದಕ್ಕೆ ಇವರು ಯಾರು..ನಾನು ತಿನ್ನಬೇಕು ಎನ್ನಿಸಿದ್ರೆ ತಿಂತೀನಿ..ಕೇಳಲು ಇವರು ಯಾರು ಎಂದು ವಾಗ್ಧಾಳಿ ನಡೆಸಿದರು.

TRENDING