Monday, March 8, 2021
Home ಸುದ್ದಿ ಜಾಲ ಮೀಸಲಾತಿ ಹೋರಾಟದಿಂದ ಹಿಂದೆ ಸರಿದ 'ವಚನಾನಂದ ಶ್ರೀ'

ಇದೀಗ ಬಂದ ಸುದ್ದಿ

ಮೀಸಲಾತಿ ಹೋರಾಟದಿಂದ ಹಿಂದೆ ಸರಿದ ‘ವಚನಾನಂದ ಶ್ರೀ’

ಬೆಂಗಳೂರು: ಜಯಮೃಂತ್ಯುಜಯ ಸ್ವಾಮೀಜಿಯವ್ರ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2ಎಗೆ ಸೇರಿಸಬೇಕು ಎನ್ನುವ ಹೋರಾಟ ನಡೆಯುತ್ತಿದೆ. ಸಧ್ಯ ಈ ಹೋರಾಟದಿಂದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಹಿಂದೆ ಸರಿದಿದ್ದಾರೆ.

ಈ ಹೋರಾಟದಿಂದ ಹಿಂದೆ ಸರಿದಿರುವುದರ ಬಗ್ಗೆ ಸ್ಪಷ್ಟನೆ ನೀಡಿರುವ ವಚನಾನಂದ ಶ್ರೀಗಳು, ‘ ವ್ಯಕ್ತಿ, ಜನನಾಯಕರ ಹಿತಾಸಕ್ತಿಗೆ ನಾನು ಸೊಪ್ಪು ಹಾಕುವುದಿಲ್ಲ. ಹೋರಾಟದಲ್ಲಿ ರಾಜಕೀಯ ಬೆರೆತ ಹಿನ್ನೆಲೆಯಲ್ಲಿ ನಾನು ಹಿಂದೆ ಸರಿದಿದ್ದೇನೆ. ಆದ್ರೆ, ಸಮುದಾಯದ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದರು.

ಇನ್ನು ‘ಧರಣಿ ಉಪವಾಸ ಸತ್ಯಾಗ್ರಹ ನಡೆಸುವುದು ಸರಿಯಲ್ಲ. ಹೀಗಾಗಿ ನಾನು ಹೋರಾಟದಿಂದ ಹಿಂದೆ ಸರಿದಿದ್ದೇನೆ
ನಿನ್ನೆ ಸಮಾವೇಶದ ನಂತ್ರ ನಡೆದ ಬೆಳವಣಿಗೆ ಜನನಾಯಕರ ಹಿತಾಸಕ್ತಿಗೆ ಅನುಕೂಲ. ಸಮಾವೇಶದ ಹಿಂದಿನ ದಿನವೇ
ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗದ ಬಗ್ಗೆ ನಿರ್ಧಾರಿಸಿದ್ದೇವು’ ಎಂದಿದ್ದಾರೆ.

TRENDING