Saturday, February 27, 2021
Home ಜಿಲ್ಲೆ ಮೈಸೂರು ಮೈಸೂರು : ಮೇಯರ್ ಆಯ್ಕೆ ಕುರಿತು ಎಚ್‍ಡಿಕೆ ಜತೆ ಸಚಿವ ಸೋಮಶೇಖರ್ ಚರ್ಚೆ

ಇದೀಗ ಬಂದ ಸುದ್ದಿ

ಮೈಸೂರು : ಮೇಯರ್ ಆಯ್ಕೆ ಕುರಿತು ಎಚ್‍ಡಿಕೆ ಜತೆ ಸಚಿವ ಸೋಮಶೇಖರ್ ಚರ್ಚೆ

ಮೈಸೂರು, ಫೆ.22 : ಮೇಯರ್ ಆಯ್ಕೆಗೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. 120 ಕೋಟಿ ರೂಪಾಯಿ ವೆಚ್ಚದ ಮೈಸೂರಿನ ರಿಂಗ್ ರೋಡ್ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಸಂಬಂಧ ಪಕ್ಷದ ಅಧ್ಯಕ್ಷರು, ಸಂಸದರು, ಶಾಸಕರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಿಜೆಪಿಯವರೇ ಮೇಯರ್ ಆಗುವ ವಿಶ್ವಾಸವಿದೆ ಎಂದು ಹೇಳಿದರು.

ಡೆಬ್ರಿಸ್ ಸ್ವಚ್ಚತಾ ಕಾರ್ಯ ಪೂರ್ಣಗೊಂಡಿದೆ. ಒಂದು ವೇಳೆ ಮತ್ತೆ ಯಾರಾದರೂ ಡೆಬ್ರಿಸ್ ಹಾಕಿದರೆ ಜೈಲು ವಾಸ ಪಕ್ಕಾ. ಮುಡಾದವರು ತೋರಿಸಿದ ಜಾಗದಲ್ಲಿ ಹಾಕದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಕಸ ತಂದು ಹಾಕುವ ವಾಹನ ಮಾಲೀಕರು ಸಹ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಿತ್ರದುರ್ಗದಲ್ಲಿ ಎಪಿಎಂಸಿ ಮಾದರಿಯಲ್ಲಿ ಖಾಸಗಿ ಮಾರುಕಟ್ಟೆ ನಿರ್ಮಾಣವಾಗುವ ಬಗ್ಗೆ ತಾನು ಮಾಧ್ಯಮದ ಮೂಲಕ ತಿಳಿದು ಕೊಂಡಿ ದ್ದೇನೆ. ಈ ಮಾರುಕಟ್ಟೆಯು ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಬೆಳವಣಿಗೆಗಳು ಆಗಬೇಕು. ರೈತರಿಗೆ ಉತ್ತಮ ಬೆಲೆ ಸಿಗಬೇಕು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ನಾನು ಸಹ ಚಿತ್ರದುರ್ಗಕ್ಕೆ ಹೋದಾಗ ಆ ಯೋಜನೆ ಬಗ್ಗೆ ಪರಿಶೀಲಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಪಂಚಮಸಾಲಿ ಹೋರಾಟಕ್ಕೆ ಸಂಬಂಧಪಟ್ಟಂತೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಗ್ಗೆ ಸಂಪುಟ ಸಭೆ ಯಲ್ಲೂ ಸಹ ಒಂದು ಮಟ್ಟದ ಚರ್ಚೆಗಳೂ ಆಗಿವೆ ಎಂದು ಉತ್ತರಿಸಿದರು. ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

TRENDING