Saturday, February 27, 2021
Home ಸುದ್ದಿ ಜಾಲ ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆಯ ಯುವ ಘಟಕ ಉದ್ಘಾಟನೆ

ಇದೀಗ ಬಂದ ಸುದ್ದಿ

ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆಯ ಯುವ ಘಟಕ ಉದ್ಘಾಟನೆ

ಮಧುಗಿರಿ : ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಮಧುಗಿರಿಯಲ್ಲಿ ತಾಲ್ಲೂಕು ಯುವ ಘಟಕ ಉದ್ಘಾಟನೆ ಜರುಗಿತು. ಸಂದರ್ಭದಲ್ಲಿ ಈ ಸಂಘಟನೆ ಉದ್ದೇಶಿಸಿ ಮಾತನಾಡುತ್ತ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿಲೀಪ್ ರವರು ಇಲ್ಲಿನ ಕಾರ್ಮಿಕರ ಸಮಸ್ಯೆಗಳನ್ನು ತಿಳಿಸುತ್ತಾ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದರು.

ತದನಂತರ ಸಂಘಟನೆಯ ಅಧ್ಯಕ್ಷರಾದ ಹೇಮಂತ್ ಆರ್ ಮರಿಗೌಡ್ರು ರವರು ಸಂಘಟನೆ ಒಂದು ಉದ್ಯಮವಲ್ಲ,ಜನರ ಸೇವೆ ಮಾಡಬೇಕು ಸಂಘಟನೆಯಿಂದ ಆರ್ಥಿಕವಾಗಿ ಆದಾಯ ಸಿಗುವುದಿಲ್ಲ ಸಂಘಟನೆ ಎಂದರೆ ಸಮಾಜ ಸೇವೆ ಎಂದು ಸಂಘಟನೆ ಬಗ್ಗೆ ತಿಳಿಸುತ್ತಾ ಇಲ್ಲಿನ ಕಾರ್ಮಿಕರ ಸಮಸ್ಯೆಗಳನ್ನು ವಿಚಾರಿಸಿದರು

ಸಂದರ್ಭದಲ್ಲಿ ಮಧುಗಿರಿ ತಾಲ್ಲೂಕಿನ ಯುವ ಘಟಕದ ಅಧ್ಯಕ್ಷರನ್ನಾಗಿ ಮಾರುತಿ  ಕೂಡ್ಲಾಪುರ ರವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರು ಮುರುಳಿಗೌಡ್ರು,ರಾಜ್ಯಾಧ್ಯಕ್ಷರು ಹೇಮಂತ್ ಆರ್ ಮರಿಗೌಡ್ರು , ಯುವಘಟಕದ ರಾಜ್ಯಾಧ್ಯಕ್ಷರು ಚಂದನ್ ಗೌಡ್ರು, ಉಪಾಧ್ಯಕ್ಷ ರು ಹನಿಶ್ ಮತ್ತು ಜಗದೀಪ್ , ಧನ ಶೇಖರ್, ರಾಣ ಜಯರಾಮ್, ದೊಡ್ಡರಾಜು,ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿಲೀಪ್ ರವರು ಹಾಗೂ ಶಿವಕುಮಾರ್ ರವರು ಮತ್ತು ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರದೀಪ್

ವಿ ನ್ಯೂಸ್ 24

ಮಧುಗಿರಿ

TRENDING