Monday, March 8, 2021
Home ರಾಜ್ಯ ಕೇರಳ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕು ಅಂದ್ರೆ ಕೊರೊನಾ ನೆಗೆಟಿವ್‌ ವರದಿ ಕಡ್ಡಾಯ

ಇದೀಗ ಬಂದ ಸುದ್ದಿ

ಕೇರಳ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕು ಅಂದ್ರೆ ಕೊರೊನಾ ನೆಗೆಟಿವ್‌ ವರದಿ ಕಡ್ಡಾಯ

ಬೆಳಗಾವಿ : ಕೇರಳ, ಮಹಾರಾಷ್ಟ್ರದಲ್ಲಿ ಕರೋನ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಈ ಎರಡು ರಾಜ್ಯಗಳಿಂದ ಬರೋ ಜನರಿಗೆ ಕಳೆದ 74 ಘಂಟೆಗಳಲ್ಲಿ ನಡೆಸಿರುವ ಕೊರೋನ ಟೆಸ್ಟ್‌ನ ವರದಿಯನ್ನು ಇಟ್ಟುಕೊಂಡು ಕರ್ನಾಟಕದ ಗಡಿಯತ್ತ ಬರಬೇಕು ಅಂತ ಹೇಳಿದೆ.

ಪ್ರಾರಂಭದಲ್ಲಿ ಬೆಳಗಾವಿ/ಮೈಸೂರು/ವಿಜಯಪುರ/ಮಂಗಳೂರು ಗಡಿ ಭಾಗದಲ್ಲಿ ಅಧಿಕಾರಿಗಳು ಬೇಕಾ ಬಿಟ್ಟಿಯಲ್ಲಿ ಜನತೆಯನ್ನು ಬಿಡುತ್ತಿದ್ದರು, ಈ ಬಗ್ಗೆ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಬೆನ್ನಲೇ ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ಕೂಡಲೇ ಗಡಿ ಭಾಗದಲ್ಲಿ ತನಿಖಾ ತಂಡವನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ ಕೆಲಸ ಮಾಡಲು ಮುಂದಾಗಿದೆ.

ಇನ್ನೂ ಕರ್ನಾಕಕ್ಕೆ ಕೂಲಿ ಕಾರ್ಮಿಕರು ಪ್ರತಿ ನಿತ್ಯ ಬೆಳಗ್ಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಕೆಲಸವನ್ನು ಮುಗಿಸಿಕೊಂಡು ಸಂಜೆ ತಮ್ಮ ತಮ್ಮಮನೆಗೆ ಹೋಗುತ್ತಿದ್ದರು, ಆದರೆ ಈಗ ಕರ್ನಾಟಕಕ್ಕೆ ಆಗಮಿಸಬೇಕಾದ್ರೆ, ಕರೋನ ನೆಗೆಟಿವ್‌ ಇರಲೇ ಬೇಕು ಒಂದು ವೇಳೆ ವರದಿ ಬೇಕಾದ್ರೆ ನಾವು ಸಾವಿರಾರೂ ಗಳನ್ನು ತೆರಬೇಕಾಗಿದೆ. ದಿನ ನಿತ್ಯ ನಮಗೆ 500ರೂ ಕೂಲಿ ಸಿಗೋದು ಹೆಚ್ಚು ಹೀಗೆ ಇರುವಾಗ ಕರೋನ ಟೆಸ್ಟ್‌ಗಾಗಿ ಪ್ರತಿ ನಿತ್ಯ ಸಾವಿರಾರೂಗಳನ್ನು ಎಲ್ಲಿಂದ ತರೋದು ಅಂತ ಗಡಿ ಭಾಗದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.

TRENDING