Sunday, February 28, 2021
Home ಜಿಲ್ಲೆ ಮೈಸೂರು ಹುಟ್ಟೂರಲ್ಲಿ ರಾಮ ಮಂದಿರ ನಿರ್ಮಿಸುತ್ತಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

ಇದೀಗ ಬಂದ ಸುದ್ದಿ

ಹುಟ್ಟೂರಲ್ಲಿ ರಾಮ ಮಂದಿರ ನಿರ್ಮಿಸುತ್ತಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆ ರಾಮ ಮಂದಿರದ ನಿರ್ಮಾಣಕ್ಕೆ ನಾನು ಹಣ ನಿಡೋದಿಲ್ಲ, ಬದಲಿಗೆ ನಾನು ನನ್ನ ಹುಟ್ಟೂರಲ್ಲೇ ರಾಮ ಮಂದಿರವನ್ನಉ ನಿರ್ಮಾಣಮ ಮಾಡುವೆ ಅಂತ ಹೇಳಿದ್ದರು.
ಅಂದ ಹಾಗೇ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟೂರಾದ ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಸುಮಾರು 45 ಲಕ್ಷ ರುಪಾಯಿ ವೆಚ್ಚದಲ್ಲಿ ರಾಮ ಮಂದಿರದ ನಿರ್ಮಾಣದ ಸಿದ್ದತೆ ನಡೆಯುತ್ತಿದೆ.

ಹೌದು, ಕೆಲ ದಿನಗಳ ಹಿಂದೆ ನನ್ನೂರಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಅಂತ ಹೇಳಿದ್ದ, ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಈಗಾಗಲೇ ಸಿದ್ದರಾಮಯ್ಯನವರ ತವರೂರಾದ ಸಿದ್ದರಾಮನಹುಂಡಿಯಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣ ವಾಗುತ್ತಿದ್ದು, 120 ಅಡಿ ಉದ್ದ 45 ಅಡಿ ಅಗಲದ ನಿವೇಶನದಲ್ಲಿ ರಾಮನ ಮಂದಿರ ನಿರ್ಮಾಣವಾಗುತ್ತಿದೆ.

ರಾಮ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿಯವರ ಮುಂದಾಳತ್ವದಲ್ಲಿ ಇದರ ನಿರ್ಮಾಣವಾಗುತ್ತಿದ್ದು, ಸಿದ್ದರಾಮೇಶ್ವರ ದೇವಸ್ಥಾನ ಉದ್ಘಾಟನೆ ವೇಳೆ ಜ್ಯೋತಿಷಿಗಳು ಊರಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ರೆ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ರಾಜಕೀಯ ಭವಿಷ್ಯ ಉತ್ತಮವಾಗಲಿದೆ ಎಂದು ಸಲಹೆ ನೀಡಿದ್ದರು ಎನ್ನಲಾಗಿದ್ದು, ಈ ಕಾರಣಕ್ಕಾಗಿ ಸಿದ್ದರಾಮಯ್ಯ ಅವರ ಹೆಂಡ್ತಿ ಪಾರ್ವತಿಯವರ ಒತ್ತಾಸೆ ಮೇರೆಗೆ ಮಗ ಹಾಗೂ ಶಾಸಕರಾದ ಯತೀಂದ್ರ‌ ಅವರ ನೆರವಿನೊಂದಿಗೆ ಈ ದೇವಾಲಯವನ್ನು ನಿರ್ಮಾಣವಾಗುತ್ತಿದೆಯಂತೆ. ಗರ್ಭಗುಡಿ 40×60 ಅಡಿ ವಿಶಾಲವಾಗಿದ್ದು, ಪ್ರಾಂಗಣ ಹಾಗೂ ಹೊರಾಂಗಣ ಕಟ್ಟಡವಿದ್ದು, ಗರ್ಭಗುಡಿಯ ಸುತ್ತ 10 ದೇವರುಗಳ ಸ್ಥಾಪನೆಗೆ ಪ್ರಭಾವಳಿಗಳ ಕೂಡ ನಿರ್ಮಾಣ ಮಾಡಿದ್ದು, ಈಗಾಗಲೇ ರಾಮ ಮಂದಿರದ ಶೇ. 80 ರಷ್ಟು ಕಾಮಗಾರಿ ಪೂರ್ಣವಾಗಿದೆ. ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಎಲ್ಲವೂ ಅಂದುಕೊಂಡತೆ ಆದರೇ ಏಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ಇದು ಲೋಕರ್ಪರ್ಣೆಯಾಗಲಿದೆ

TRENDING