Tuesday, March 9, 2021
Home ಅಂತರ್ ರಾಜ್ಯ ಇಂದು ಪ್ರಧಾನಿ ಮೋದಿ ಅಸ್ಸಾಂ, ಪ. ಬಂಗಾಳಕ್ಕೆ ಭೇಟಿ

ಇದೀಗ ಬಂದ ಸುದ್ದಿ

ಇಂದು ಪ್ರಧಾನಿ ಮೋದಿ ಅಸ್ಸಾಂ, ಪ. ಬಂಗಾಳಕ್ಕೆ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಸ್ಸೋಂ ಹಾಗೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಇಂದು ಬೆಳಗ್ಗೆ 11:30 ಕ್ಕೆ ಅಸ್ಸೋಂನ ಧೆಮಾಜಿಯ ಸಿಲಾಪಥರ್‌ನಲ್ಲಿ ಆಯೋಜಿಸಿರುವ ತೈಲ ಮತ್ತು ಅನಿಲ ವಲಯದ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಹಲವಾರು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಅಸ್ಸೋಂನ ಇಂಡಿಯನ್ ಆಯಿಲ್‌ನ ಬೊಂಗೈಗಾಂವ್ ಸಂಸ್ಕರಣಾಗಾರದಲ್ಲಿ ಐಎನ್‌ಡಿಮ್ಯಾಕ್ಸ್ ಘಟಕ, ಮಧುಬನ್​ನ ಆಯಿಲ್ ಇಂಡಿಯಾ ಲಿಮಿಟೆಡ್‌ನ ಸೆಕೆಂಡರಿ ಟ್ಯಾಂಕ್ ಫಾರ್ಮ್, ತಿನ್‌ಸುಕಿಯಾದ ಮಕುಮ್‌ನ ಹೆಬೆಡಾ ಗ್ರಾಮದಲ್ಲಿ ದಿಬ್ರುಗರ್ ಮತ್ತು ಗ್ಯಾಸ್ ಸಂಕೋಚಕ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಧೆಮಾಜಿ ಎಂಜಿನಿಯರಿಂಗ್ ಕಾಲೇಜನ್ನು ಉದ್ಘಾಟಿಸಿ, ಸುವಾಲ್ಕುಚಿ ಎಂಜಿನಿಯರಿಂಗ್ ಕಾಲೇಜಿಗೆ ಅಡಿಪಾಯ ಹಾಕಲಿದ್ದಾರೆ.

ನಂತರ ಪಶ್ಚಿಮಬಂಗಾಳಕ್ಕೆ ತೆರಳಲಿರುವ ಪ್ರಧಾನಿ, ಅಲ್ಲಿನ ಹೂಗ್ಲಿಯಲ್ಲಿ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನೊಪಾರದಿಂದ ದಕ್ಷಿಣೇಶ್ವರ ವಿಸ್ತರಣಾ ಮೆಟ್ರೋ ಮಾರ್ಗದ ಸೇವೆಗೆ ಚಾಲನೆ ನೀಡಲಿದ್ದಾರೆ. ಇತರ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಲಿದ್ದಾರೆ.

TRENDING