Monday, March 8, 2021
Home ರಾಜ್ಯ ಕೇರಳದಲ್ಲಿ 'ವಿಜಯ ಯಾತ್ರೆ' ಗೆ ಚಾಲನೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್

ಇದೀಗ ಬಂದ ಸುದ್ದಿ

ಕೇರಳದಲ್ಲಿ ‘ವಿಜಯ ಯಾತ್ರೆ’ ಗೆ ಚಾಲನೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್

 ಕಾಸರಗೋಡು: ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ನೇತೃತ್ವದ ‘ವಿಜಯ ಯಾತ್ರೆ’ ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಕಾಸರಗೋಡಿನಲ್ಲಿ ಚಾಲನೆ ನೀಡಿದರು.

ಮಾರ್ಚ್ 7 ರಂದು ತಿರುವನಂತಪುರಂನಲ್ಲಿ ನಡೆಯುವ ವಿಜಯಯಾತ್ರೆ ಕೊನೆಯ ದಿನದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ ಸುರೇಂದ್ರನ್, ಯಾತ್ರೆಯ ಮೂಲಕ ಭ್ರಷ್ಟಾಚಾರ ರಹಿತ ಕೇರಳ, ಓಲೈಕೆ ವಿರೋಧಿ ರಾಜಕೀಯ ಮತ್ತು ಕೇರಳದ ಸಮಗ್ರ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.

ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿರುವ ಯಾತ್ರೆಯ ಅಂಗವಾಗಿ 14 ಬೃಹತ್ ಸಾರ್ವಜನಿಕ ಸಭೆಗಳು, 80 ಸಾಮಾನ್ಯ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುವುದು ಎಂದು ಸರೇಂದ್ರನ್ ಹೇಳಿದ್ದಾರೆ.

TRENDING