Sunday, February 28, 2021
Home ಅಂತರ್ ರಾಜ್ಯ ಕಾರು- ಬಸ್ ನಡುವೆ ಭೀಕರ ಅಪಘಾತ : ಐವರು ಸ್ಥಳದಲ್ಲಿಯೇ ಸಾವು

ಇದೀಗ ಬಂದ ಸುದ್ದಿ

ಕಾರು- ಬಸ್ ನಡುವೆ ಭೀಕರ ಅಪಘಾತ : ಐವರು ಸ್ಥಳದಲ್ಲಿಯೇ ಸಾವು

ನೆವಾಸ : ಮಹಾರಾಷ್ಟ್ರದಲ್ಲಿ ಕಾರು ಮತ್ತು ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ.

ಕಾರು ಮತ್ತು ಸಾರಿಗೆ ಬಸ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ನೆವಾಸ ತಾಲೂಕಿನ ಔರಂಗಾಬಾದ್-ಅಹ್ಮದ್‌ನಗರ ಹೆದ್ದಾರಿಯ ದೇವ್‌ಗಡ್ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.

ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಮೃತರನ್ನು ಜಾಲ್ನಾ ಜಿಲ್ಲೆಯವರೆಂದು ಗುರುತಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

TRENDING