Saturday, April 17, 2021
Home ಸುದ್ದಿ ಜಾಲ ಉತ್ತರಾಖಂಡ ನೀರ್ಗಲ್ಲು ಕುಸಿತ: ತಪೋವನದಲ್ಲಿ ಮತ್ತೆ ಎರಡು ಶವ ಪತ್ತೆ

ಇದೀಗ ಬಂದ ಸುದ್ದಿ

ಉತ್ತರಾಖಂಡ ನೀರ್ಗಲ್ಲು ಕುಸಿತ: ತಪೋವನದಲ್ಲಿ ಮತ್ತೆ ಎರಡು ಶವ ಪತ್ತೆ

ಗೋಪೇಶ್ವರಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತ ಅವಘಡ ಸಂಬಂಧಿಸಿದಂತೆ ರಕ್ಷಣಾ ಕಾರ್ಯ 15 ನೇ ದಿನವೂ ಮುಂದುವರಿದಿದ್ದು, ಶನಿವಾರ ತಪೋವನ-ವಿಷ್ಣುಗಡ್ ಯೋಜನೆಯ ಸ್ಥಳದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದೆ.

‘ಶನಿವಾರ ಸಂಜೆ ಮೂರು ಶವಗಳು ಪತ್ತೆಯಾಗಿತ್ತು. ರಾತ್ರಿ ವೇಳೆಗೆ ಇನ್ನೂ ಎರಡು ಶವಗಳು ಸಿಕ್ಕಿವೆ. ಈ ಮೂಲಕ ಮೃತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. 137 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಫೆಬ್ರುವರಿ 7 ರಂದು ಚಮೋಲಿ ಜಿಲ್ಲೆಯ ರಿಷಿ ಗಂಗಾದ ಬಳಿ ನೀರ್ಗಲ್ಲು ಕುಸಿತ ಸಂಭವಿಸಿದೆ. ಇದರಿಂದಾಗಿ ಸಂಭವಿಸಿದ ಪ್ರವಾಹದಲ್ಲಿ 13.2 ಮೆಗಾವಾಟ್ ಸಾಮರ್ಥ್ಯದ ರಿಷಿ ಗಂಗಾ ಜಲವಿದ್ಯುತ್ ಯೋಜನೆಯು ಸಂಪೂರ್ಣ ನಾಶಗೊಂಡಿದೆ. ತಪೋವನ-ವಿಷ್ಣುಗಡ್ ಯೋಜನೆಗೂ ಭಾರಿ ಹಾನಿಯಾಗಿದೆ.

TRENDING