Tuesday, April 13, 2021
Home ಜಿಲ್ಲೆ ವಿಜಯಪುರ ಸಿಂದಗಿ : ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಇದೀಗ ಬಂದ ಸುದ್ದಿ

ಸಿಂದಗಿ : ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಸಿಂದಗಿ: ಗೃಹಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದಿದೆ. ಯಂಕಂಚಿ ನಿವಾಸಿ ಶರಣಮ್ಮಾ (35)ಶವವಾಗಿ ಪತ್ತೆಯಾದ ಗೃಹಿಣಿ.ಇನ್ನು ಪತಿಯ ಮನೆಯಲ್ಲಿ ಒಂಟಿಯಾಗಿರುತ್ತಿದ್ದ ಶರಣಮ್ಮಾ ಪತಿ ವಿರೇಶ ಹಾಗೂ ಮನೆಯವರು ವಿಜಯಪುರ ನಗರದಲ್ಲಿ ವಾಸವಿದ್ದಾರೆ. ಶರಣಮ್ಮಳನ್ಮು ಯಂಕಂಚಿ ಗ್ರಾಮದಲ್ಲಿ ಒಬ್ಬಂಟಿಯಾಗಿ ಇಟ್ಟಿದ್ದರೆಂಬ ಆರೋಪ ಕೇಳಿಬಂದಿದೆ.

ಅಲ್ಲದೇ,ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಚೊಂಚಿ ಗ್ರಾಮದ ಶರಣಮ್ಮಾ ನಾಲ್ಕು ವರ್ಷಗಳ ಹಿಂದೆ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ವಿರೇಶ ಜೊತೆಗೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಹಾಗೂ ಮನೆಯವರು ಕೊಲೆ ಮಾಡಿದ್ದಾರೆಂದು ಶರಣಮ್ಮ ಪೋಷಕರ ಆರೋಪಿಸಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಬರೀಶ್ ಎಸ್ ಎಸ್

ವಿ ನ್ಯೂಸ್ 24  ಕನ್ನಡ

ಸಿಂದಗಿ

TRENDING