Saturday, April 17, 2021
Home ಸುದ್ದಿ ಜಾಲ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲವಾದರೆ ಬಾಯಿ ಮುಚ್ಚಿಕೊಂಡು ತೆಪ್ಪಗಿರಲಿ: ಸಚಿವ ಪ್ರಹ್ಲಾದ್ ಜೋಶಿ

ಇದೀಗ ಬಂದ ಸುದ್ದಿ

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲವಾದರೆ ಬಾಯಿ ಮುಚ್ಚಿಕೊಂಡು ತೆಪ್ಪಗಿರಲಿ: ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿಅಯ್ಯೋಧೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಬಗ್ಗೆ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ,ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯ ಹಿಂದೆ ಮತತುಷ್ಠೀಕರಣ ಚಿಂತನೆ ಇದೆ. ಆದರೆ ಮುಸ್ಲಿಮರು ಇವರನ್ನು ನಂಬುವುದಿಲ್ಲ ಎಂದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂದಿರಕ್ಕೆ ದೇಣಿಗೆ ನೀಡುವುದಿಲ್ಲವಾದರೆ, ಬಾಯಿ ಮುಚ್ಚಿಕೊಂಡು ತೆಪ್ಪಗಿರಲಿ. ಅದು ಬಿಟ್ಟು ತಪ್ಪು ಸಂದೇಶದ ಹೇಳಿಕೆಗಳನ್ನು ನೀಡುವುದು ನಿಲ್ಲಿಸಲಿ ಎಂದರು.

ಮಂದಿರಕ್ಕೆ ದೇಣಿಗೆ ಕಡ್ಡಾಯಗೊಳಿಸಿಲ್ಲ, ಕೊಡದವರ ಮನೆಗೆ ಗುರುತು ಹಾಕುವ ಕೆಲಸ ಮಾಡುತ್ತಿಲ್ಲ. ಸತ್ಯ ಅರಿಯದೆ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡುತ್ತಿರುವುದು ದುರ್ದೈವದ ಸಂಗತಿ ಎಂದರು.

ಮಂದಿರಕ್ಕೆ ದೇಣಿಗೆ ಸಂಗ್ರಹಕ್ಕೆ ಟ್ರಸ್ಟ್ ರಚನೆಗೊಂಡಿದೆ. ಪಾರದರ್ಶಕತೆ ಕಾಪಾಡಲಾಗುತ್ತಿದೆ. ಸಿದ್ದರಾಮಯ್ಯ ಮಂದಿರ ಒಂದೇ ಅಲ್ಲ. ದಿಶಾ ರವಿ ಬಂಧನ ವಿಚಾರದಲ್ಲೂ ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ಖಲೀಸ್ತಾನದ ಬೆಂಬಲಿಸುವವರನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಂದಿರಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸಹ ದೇಣಿಗೆ ನೀಡಿದ್ದಾರೆ. ಇದನ್ನಾದರು ಸಿದ್ದರಾಮಯ್ಯ ನವರು ಗಮನಿಸಲಿ. ಹಿಂದೂ ವಿರೋಧಿ ನೀತಿಯನ್ನು ಕಾಂಗ್ರೆಸ್ ತೋರುತ್ತಲೇ ಬಂದಿದೆ. ಮತಗಳಿಗಾಗಿ ದಾವೂದ್ ಇಬ್ರಾಹಿಂ ನನ್ನು ಬೆಂಬಲಿಸಲು ಹಿಂಜರಿಯಲ್ಲ ಎಂದರು.

ಮೀಸಲಾತಿ ವಿಚಾರದಲ್ಲಿ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಕೋವಿಡ್ ಎರಡನೇ ಅಲೆ ವ್ಯಾಪಕವಾಗುತ್ತಿದ್ದು, ಜನರು ಅಗತ್ಯ ಎಚ್ಚರಿಕೆ ವಹಿಸಬೇಕೆಂದರು.

TRENDING