Tuesday, April 13, 2021
Home ಸುದ್ದಿ ಜಾಲ ರಿಂಕು ಶರ್ಮ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಇದೀಗ ಬಂದ ಸುದ್ದಿ

ರಿಂಕು ಶರ್ಮ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ನವದೆಹಲಿ, ಫೆ.21- ರಿಂಕುಶರ್ಮ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ದೆಹಲಿ ಪೊಲೀಸರು ಹತ್ಯೆಗೆ ಕೋಮು ದ್ವೇಷ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫೆ.10ರಂದು ರಿಂಕುಶರ್ಮ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಆತನನ್ನು ಹತ್ಯೆ ಮಾಡಿದ್ದರು.

ಮಾರಕಾಯ್ದುಗಳನ್ನು ಹಿಡಿದು ಮನೆಗೆ ನುಗ್ಗಿದ ಆರೋಪಿಗಳು ಕೆಲವರು ಒಳಗೆ ಹೋದರೆ, ಇನ್ನು ಕೆಲವರು ಹೊರಗೆ ನಿಂತು ಅಕ್ಕಪಕ್ಕದವರನ್ನು ಬೆದರಿಸಿದ್ದರು. ಈ ಪ್ರಕರಣ ಕಾನೂನು ಸುವ್ಯವಸ್ಥೆಗೆ ಸವಾಲಾಗಿತ್ತು.

ರಿಂಕು ಶರ್ಮ ಅವರ ಸಹೋದರ ಮಾನು, ತಮ್ಮ ಸಹೋದರನ ಹತ್ಯೆಗೆ ಕೋಮು ದ್ವೇಷ ಕಾರಣ ಎಂದು ಆರೋಪಿಸಿದ್ದರು. ರಿಂಕು ರಾಮಮಂದಿರ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿದ್ದರು. ಆ ಕಾರಣಕ್ಕಾಗಿ ಹತ್ಯೆಯಾಗಿದೆ ಎಂದು ಆರೋಪಿಸಿದ್ದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು.

ಸ್ಥಳದಲ್ಲಿದ್ದ ಸಿಸಿ ಟಿವಿಗಳ ದೃಶ್ಯಾವಗಳನ್ನು ಆಧರಿಸಿ ಡೀನ್ ಮೊಹದ್ (40), ದಿಲ್‍ಷನ್ (22), ಫಯಾಸ್ (21), ಫಿಜಾಯನ್(21) ಎಂಬ ಆರೋಪಿಗಳನ್ನು ಪೊಲೀಸರು ಬಂಸಿದ್ದಾರೆ.

ಆರೋಪಿಗಳು ಮತ್ತು ರಿಂಕು ಶರ್ಮ ಅವರ ನಡುವೆ ಭರ್ತಡೆ ಪಾರ್ಟಿಯೊಂದರಲ್ಲಿ ಜಗಳವಾಗಿದ್ದು, ಆ ಸಂದರ್ಭದಲ್ಲಿ ಪರಸ್ಪರ ಹಲ್ಲೆಗಳಾಗಿದ್ದು, ಅಲ್ಲಿಯೇ ಪ್ರಾಣ ಬೆದರಿಕೆ ಹೊಡ್ಡಲಾಗಿತ್ತು. ಅನಂತರ ಆರೋಪಿಗಳು ರಿಂಕು ಶರ್ಮ ಅವರ ಮನೆಗೆ ನುಗ್ಗಿ ಹತ್ಯೆ ಮಾಡಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಕೊಲೆಯ ಹಿಂದೆ ಕೊಮು ದ್ವೇಷ ಇಲ್ಲ ಎಂದು ಇದೇ ವೇಳೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

TRENDING