ವಾಷಿಂಗ್ಟನ್ : ಅಧಿಕಾರದಿಂದ ನಿರ್ಗಮಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ನಡೆಯಲಿರುವ ಕನ್ಸರ್ವೇಟಿವ್ ಸಮ್ಮೇಳನದಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಡಬ್ಲ್ಯುಎಫ್ಟಿವಿ ವರದಿ ಮಾಡಿದೆ.
ಇದೇ 25 ರಿಂದ 28 ರವರೆಗೆ ನಡೆಯಲಿರುವ ಸಮ್ಮೇಳನದ ಕೊನೆಯ ದಿನ ಟ್ರಂಪ್ ಮಾತನಾಡಲಿದ್ದು, ಇದು ಅವರ ಮೊದಲ ಸಾರ್ವಜನಿಕ ಭಾಷಣವಾಗಿದೆ.ಹೀಗಾಗಿ ಕೂತುಹಲವೂ ಹೆಚ್ಚಾಗಿದೆ.
ಟ್ರಂಪ್ ರಿಪಬ್ಲಿಕನ್ ಪಕ್ಷದ ಭವಿಷ್ಯ ಮತ್ತು ನೂತನ ಅಧ್ಯಕ್ಷ ಜೋ ಬಿಡನ್ ಅವರ ವಲಸೆ ನೀತಿಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಎಬಿಸಿ ನ್ಯೂಸ್ಗೆ ಮೂಲಗಳು ದೃಡಪಡಿಸಿವೆ.